ಚೂರಿ ಇರಿದು ಅಪ್ರಾಪ್ತ ಮಗನನ್ನೇ ಕೊಂದ ಪಾಪಿ ತಂದೆ | JANATA NEWS

ಕೋಲಾರ : ತಂದೆಯೇ ತನ್ನ ಅಪ್ರಾಪ್ತ ಮಗನನ್ನು ಬರ್ಬರವಾಗಿ ಕೊಂದ ಘಟನೆ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ತಂದೆಯಿಂದ 9 ವರ್ಷದ ಭುವನ್ ಕೊಲೆಯಾಗಿದ್ದಾನೆ. ಸುಬ್ರಹ್ಮಣ್ಯಂ ಎಂಬಾತ ಕೊಲೆಗೈದ ಆರೋಪಿ.
ಸುಬ್ರಹ್ಮಣ್ಯಂ 5 ವರ್ಷಗಳ ಹಿಂದೆ ತನ್ನ ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಸೋಮವಾರ ಬೆಂಗಳೂರಿನಿಂದ ಬಂದ ಸುಬ್ರಹ್ಮಣ್ಯಂ ಮಧ್ಯಾಹ್ನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಗ ಭುವನ್ ಅನ್ನು ಕರೆದುಕೊಂಡು ಬಂದಿದ್ದಾನೆ.
ಶಾಲೆಯಿಂದ ಕರೆತಂದ ಸುಬ್ರಹ್ಮಣ್ಯಂ ಕೋಲಾರದ ಗದ್ದೆಕಣ್ಣೂರು ಬಳಿ ಕರೆದುಕೊಂಡು ಬಂದು ಭೀಕ್ಷೆ ಬೇಡಲು ಬಿಟ್ಟಿದ್ದ. ಶಾಲೆಯ ಸಮವಸ್ತ್ರ ಧರಿಸಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಭುವನ್ ಅನ್ನು ವಿಚಾರಿಸಿದಾಗ ನಂಗಲಿ ಗ್ರಾಮದಲ್ಲಿ ಅಜ್ಜಿ ಮನೆಯಲ್ಲಿದ್ದು ತಂದೆ ಇಲ್ಲಿಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಮಗುವನ್ನು ಅಜ್ಜಿಯ ಜೊತೆಗೆ ಕಳಿಸಿ, ತಂದೆ ಸುಬ್ರಹ್ಮಣ್ಯಂನನ್ನು ಬೆಂಗಳೂರಿಗೆ ಹೋಗಲು ತಿಳಿಸಿದ್ದಾರೆ. ಆದರೆ ಬೆಂಗಳೂರಿಗೆ ಹೋಗದ ಸುಬ್ರಮಣ್ಯಂ ಅಜ್ಜಿ ಮನೆಗೆ ಬರುವ ಮೊದಲೇ ಮಗನನ್ನು ಮನೆಗೆ ಬಿಡುವುದಾಗಿ ಕರೆದುಕೊಂಡು ಹೋಗಿ ಮನೆಯಲ್ಲೇ ಮಗುವನ್ನು ಕುತ್ತಿಗೆ ಸೀಳಿ ಕೊಂದಿದ್ದಾನೆ.
ಆರೋಪಿ ಬಾಲಸುಬ್ರಹ್ಮಣ್ಯಂ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.