ಮುಸ್ಲಿಂ ಸಮುದಾಯಕ್ಕೆ ನಾವು ಅನ್ಯಾಯ ಮಾಡಿಲ್ಲ: ಬಿಎಸ್ ಯಡಿಯೂರಪ್ಪ | JANATA NEWS

ಬೆಂಗಳೂರು : ಕೇಂದ್ರದ ಸಚಿವರು, ಸಂಸದರು ಎಲ್ಲರ ಸಹಕಾರದೊಂದಿಗೆ ಮತ್ತೆ ಅಧಿಕಾರಕ್ಕೆ ಬರೋದು ನಿಶ್ಚಿತ. ಮೀಸಲಾತಿ ಪ್ರಮಾಣ ಏರಿಸುವ ಮೂಲಕ ಅನುಕೂಲವಾಗಿದೆ. ಮುಸ್ಲಿಮರಿಗೆ ನಾವು ಅನ್ಯಾಯ ಮಾಡಿಲ್ಲ. ಮುಸಲ್ಮಾನರನ್ನು 4% ಮೀಸಲಾತಿಯಿಂದ ತೆಗೆದು ews ಗೆ ಸೇರಿಸಿದ್ದೇವೆ ಎಂದಿದ್ದಾರೆ.
ಈ ಬಾರಿ ಕಾಂಗ್ರೆಸ್ 60-70 ಸೀಟಿಗೆ ಸೀಮಿತ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಇನ್ನು ಎರಡ್ಮೂರು ಸುತ್ತು ರಾಜ್ಯಕ್ಕೆ ಬರುವವರಿದ್ದಾರೆ. ಶಿವಮೊಗ್ಗ ವಿಮಾನ ಲ್ದಾಣ ಉದ್ಘಾಟನೆಗೆ 2 ಲಕ್ಷ ಜನರು ಬಂದಿದ್ದರಿಂದ ನಿಲ್ಲಲು ಜಾಗವಿಲ್ಲದೇ ಕಷ್ಟವಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಂದಾಗ ಜನ ಬೆಂಬಲ ನೋಡಿದ್ರೆ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ 100ಕ್ಕೆ 100 ಸೂರ್ಯ ಚಂದ್ರ ಇರುವುದು ಎಷ್ಟು ಸ್ಪಷ್ಟವೋ, ಅಷ್ಟೇ ಸ್ಪಷ್ಟವಾಗಿ ನಾವು ಅಧಿಕಾರ ರಚನೆ ಮಾಡುತ್ತೇವೆ. ಬಿಜೆಪಿಗೆ ಮೋದಿ ಎಂಬ ನಾಯಕ ಸಿಕ್ಕಿದ್ದಾರೆ. ನಮ್ಮ ರಾಜ್ಯದಲ್ಲಿ ನಾಲ್ಕು ತಂಡಗಳಲ್ಲಿ ವಿಜಯ ಸಂಕಲ್ಪ ಅಭಿಯಾನ ಮಾಡಿದಾಗ ಜನ ಸೇರಿದ್ದು ಅಚ್ಚರಿ ತಂದಿದೆ ಎಂದರು.
ಯಾವ ಪಕ್ಷ ನೂರಕ್ಕೆನೂರು ಅಧಿಕಾರಕ್ಕೆ ಬರುತ್ತೋ ಆ ಪಕ್ಷದಿಂದ ಸ್ಪರ್ಧಿಸೋಕೆ ಎಲ್ಲರೂ ಮುಂದಾಗುತ್ತಾರೆ. ಯಾರಿಗೆ ಸೀಟ್ ಸಿಗುವುದಿಲ್ಲವೋ ಅಂತಹವರು ಬಿಜೆಪಿ ಪಕ್ಷದ ಪರ ನಿಂತು ಕೆಲಸ ಮಾಡಬೇಕು. ಟಿಕೆಟ್ ನೀಡುವುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದಿದ್ದಾರೆ.
ಇದೇ ವೇಳೆ ಮೀಸಲಾತಿ ವಿಚಾರ ಪ್ರಸ್ತಾಪಿಸಿ, ಮೀಸಲಾತಿ ಪ್ರಮಾಣವನ್ನು ಏರಿಸುವ ಮೂಲಕ ಹಲವಾರು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇವೆ. ಮುಸ್ಲಿಂ ಸಮುದಾಯಕ್ಕೆ ನಾವು ಅನ್ಯಾಯ ಮಾಡಿಲ್ಲ. EWS ವಿಭಾಗದಲ್ಲಿ ಅವರಿಗೆ ಮೀಸಲಾತಿ ನೀಡಲಾಗಿದೆ ಎಂದರು.