ನೇಣು ಬಿಗಿ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಪತ್ತೆ! | JANATA NEWS

ಬೆಂಗಳೂರು : ಅನುಮಾಸ್ಪದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ ನಗರದ ಸುಬ್ರಮಣ್ಯಪುರದ ಪೂರ್ಣಪ್ರಜ್ಞ ಲೇಔಟ್ ನಲ್ಲಿ ನಡೆದಿದೆ.
ರಶ್ಮಿ (32) ಸಾವಿಗೀಡಾದ ಮಹಿಳೆ. ಮನೆಯ ರೂಮ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈಕೆ ಖಾಸಗಿ ಕಂಪನಿಯ ಇಂಜಿನಿಯರ್ ಅರವಿಂದ್ ಎಂಬಾತನ ಪತ್ನಿ.
ಮಂಡ್ಯ ಮೂಲದ ರಶ್ಮಿ ಮತ್ತು ಶ್ರೀರಂಗಪಟ್ಟಣದ ಅರವಿಂದ್ ಮದುವೆ ಹತ್ತು ವರ್ಷಗಳ ಹಿಂದೆ ನಡೆದಿದ್ದು, ಈ ದಂಪತಿಗೆ ಐದು ವರ್ಷದ ಮಗ ಇದ್ದಾನೆ. ರಶ್ಮಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತಿದ್ದಳು.
ಸಾವಿನ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಸುಬ್ರಮಣ್ಯಪುರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
English summary :The dead body of the housewife was found hanging