ಕೇವಲ 5 ರೂ.ಗೆ ಬಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಹತ್ಯೆ | JANATA NEWS

ಹುಬ್ಬಳ್ಳಿ : ಕೇವಲ 5 ರೂ.ಗೆ ಬಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಹತ್ಯೆ ನಡೆದಿದೆ. ಅಜ್ಜಿ ಮನೆಯಿಂದ ನಾಪತ್ತೆಯಾಗಿದ್ದ ಬಾಲಕನ ಶವ ಅರೆ ಬೆತ್ತಲೆಯಾಗಿ ಪತ್ತೆಯಾಗಿತ್ತು.
ಕೊಲೆ ಪ್ರಕರಣವನ್ನು ಬೇಧಿಸಿದ ಬೆಂಡಿಗೇರಿ ಠಾಣೆಯ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರವಿ ಬಳ್ಳಾರಿ ಎಂಬಾತ ಕೊಲೆ ಆರೋಪಿ. ಶಾಲೆಯಲ್ಲಿ ಬೇಸಿಗೆಯ ರಜೆ ಇರೋ ಕಾರಣ ಆರೋಪಿ ರವಿ ಬಳ್ಳಾರಿಯಿಂದ ಹುಬ್ಬಳ್ಳಿಯ ಶ್ರೀನಗರದಲ್ಲಿರೋ ಅಜ್ಜಿ ಮನೆಯಲ್ಲಿ ವಾಸವಿದ್ದು, ಅಲ್ಲಿನ ಮಕ್ಕಳೊಂದಿಗೆ ಆಟವಾಡಿಕೊಂಡಿದ್ದನು.
ಆರೋಪಿ ರವಿಗೆ ಬಾಲಕ ನದೀಂ ಪರಿಚಯಸ್ಥನಾಗಿದ್ದ.. ಬಾಲಕ ರವಿ ಬಳಿ 5 ರೂಪಾಯಿ ಹಣ ಕೇಳಿರುತ್ತಾನೆ. ಐದು ರೂಪಾಯಿ ಕೊಟ್ಟ ಬಳಿಕ ಮತ್ತೆ ಐದು ರೂಪಾಯಿ ಕೇಳಿದ್ದಕ್ಕೆ ರವಿ ಕೋಪಗೊಂಡಿದ್ದಾನೆ. ಮತ್ತೆ, ಮತ್ತೆ 5 ರೂ. ಕೊಡುವಂತೆ ಪೀಡಿಸಿದಾಗ ಉದ್ರಿಕ್ತಗೊಂಡ ರವಿ ಬಾಲಕ ನದೀಂ ಕೆನ್ನೆಗೆ ಹೊಡೆದಿದ್ದಾನೆ.
ಇದರಿಂದ ಬಾಲಕ ಮೂರ್ಚೆ ಹೋಗಿದ್ದನು. ಇನ್ನು ಮೂರ್ಚೆ ಹೋದಾಗ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಜೀವ ಉಳಿಸಲು ಪ್ರಯತ್ನ ಮಾಡದೇ, ಬಾಲಕನನ್ನು ಎತ್ತಿಕೊಂಡು ಹೋಗಿ ಪಾಳು ಬಿದ್ದ ಜಾಗದಲ್ಲಿ ಮಲಗಿಸಿದ್ದಾನೆ. ನಂತರ ಬಾಲಕನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಯನ್ನು ಮಾಡಿದ್ದಾನೆ. ನಂತರ ಅನುಮಾನ ಬರಬಾರದು ಎಂದು ಬಾಲಕನ ಬಟ್ಟೆ ಬಿಚ್ಚಿ ಅಲ್ಲಿಂದ ಕಿಲ್ಲರ್ ರವಿ ಪರಾರಿ ಆಗಿದ್ದಾನೆ.
ಬಾಲಕನ ತಂದೆ ತಾಯಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.