ಫುಲ್ ಹೆಲ್ಮೆಟ್ ಧರಿಸಿದ್ದ ಯುವಕ ಬಚಾವ್, ಅರ್ಧ ಹೆಲ್ಮೆಟ್ ಧರಿಸಿದ್ದ ಯುವತಿ ಸಾವು | JANATA NEWS

ಬೆಂಗಳೂರು : ಹೊಸಕೆರೆಹಳ್ಳಿ ನೈಸ್ ರಸ್ತೆ ಟೋಲ್ ಬಳಿ ನಡೆದ ಅಪಘಾತದಲ್ಲಿ ಯುವಕ ಆನಂದ್ ಗಾಯಗೊಂಡಿದ್ದು ಹಾಗು ಯುವತಿ ಇಂದು ಸುಲೋಚನಾ ಎಂಬ ಯುವತಿ ಮೃತಪಟ್ಟಿದ್ದಾರೆ.
ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದ ಸುಲೋಚನಾ ಹಾಗೂ ಆನಂದ್ ಕೆಲಸ ಮುಗಿಸಿ ನಿನ್ನೆ ಸಂಜೆ ಕೋರಮಂಗಲದಿಂದ ಮನೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ವಾಪಸಾಗುತ್ತಿದ್ದರು. ನೈಸ್ ರಸ್ತೆಯ ಟೋಲ್ ಬಳಿ ದ್ವಿಚಕ್ರ ವಾಹನದ ಹಿಂಬದಿ ಟೈರ್ ಸ್ಫೋಟಗೊಂಡಿದ್ದು ನಿಯಂತ್ರಣ ತಪ್ಪಿ ಇಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬೈಕ್‌ನಲ್ಲಿ ತೆರಳುತ್ತಿದ್ದ ಆನಂದ್, ಸುಲೋಚನಾ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಸುಲೋಚನಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಸುಲೋಚನ ಹಾಲ್ಫ್ ಹೆಲ್ಮೆಡ್ ಧರಿಸಿದ್ದರು. ಅವರ ತಲೆಗೆ ಗಂಭೀರ ಗಾಯವಾಗಿತ್ತು. ಹಾಘೂ ಫುಲ್ ಹೆಲ್ಮೆಟ್ ಧರಿಸಿದ್ದ ಆನಂದ್ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸುಲೋಚನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.