ನಾನು ಯಾವುದೇ ಚಿತ್ರನಟರನ್ನ ವೈಯಕ್ತಿಕವಾಗಿ ದುರುಪಯೋಗ ಮಾಡಿಕೊಳ್ಳಲ್ಲ, ನನ್ನ ಕಾರ್ಯಕರ್ತರೇ ನನಗೆ ಸ್ಟಾರ್ ಕ್ಯಾಂಪೇನರ್ | JANATA NEWS

ಬೆಂಗಳೂರು : ಚಿತ್ರ ನಟರು ಸಮಾಜದ ಎಲ್ಲಾ ವರ್ಗಕ್ಕೂ ಸೇರಿದವರು. ನಾನು ಯಾವುದೇ ಚಿತ್ರ ನಟರನ್ನು ವೈಯಕ್ತಿಕವಾಗಿ ದುರುಪಯೋಗ ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಟರನ್ನು ನೋಡಲು ಅಭಿಮಾನಿಗಳು, ಜನರು ಬರುತ್ತಾರೆ, ಜೈಕಾರ ಹಾಕುತ್ತಾರೆ. ಅವರು ಎಲ್ಲಾ ಪಕ್ಷದ ಪರವಾಗಿಯೂ ಪ್ರಚಾರಕ್ಕೆ ಹೋಗುತ್ತಾರೆ. ಅವರಿಗೆ ಸ್ಥಿರತೆ ಇಲ್ಲ. ವೈಯಕ್ತಿಕ ಬಾಂಧವ್ಯದ ಹಿನ್ನೆಲೆ ಹೋಗಬಹುದು. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳುವ ಮೂಲಕ ನಟ ಸುದೀಪ್ ಬೊಮ್ಮಾಯಿ ಪರ ಪ್ರಚಾರಕ್ಕೆ ಬರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ನಾನು ಯಾವುದೇ ಚಿತ್ರನಟರನ್ನು ವೈಯಕ್ತಿಕವಾಗಿ ದುರುಪಯೋಗ ಪಡಿಸಿಕೊಳ್ಳಲು ಸಿದ್ದನಿಲ್ಲ. ನಟರು ಸಮಾಜದ ಎಲ್ಲ ವರ್ಗದ ಜನರಿಗೆ ಸೇರಿದವರು. ನನ್ನ ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡು ನಟರ ಘನತೆ ಗೌರವವನ್ನು ಸೀಮಿತಗೊಳಿಸಲು ಇಷ್ಟಪಡುವುಲ್ಲ. ಮಮತಾ ಬ್ಯಾನರ್ಜಿ, ಕೆ.ಚಂದ್ರಶೇಖರ್ ರಾವ್ ಕೆಲವೊಂದು ಭಾಗಕ್ಕೆ ಪ್ರಚಾರಕ್ಕೆ ಬರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪರ ಚುನಾವಣಾ ಪ್ರಚಾರ ಮಾಡುತ್ತೇನೆ. ಅವರು ನನ್ನ ಕಷ್ಟಕಾಲದಲ್ಲಿ ಜತೆಗೆ ನಿಂತಿದ್ದು, ಹೀಗಾಗಿ, ಯಾವುದೇ ಪಕ್ಷಕ್ಕೂ ಸೇರ್ಪಡೆಯಾಗದೇ ಬೊಮ್ಮಾಯಿ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದ್ದರು.