ಹೆಲಿಕಾಪ್ಟರ್ ಬಂದ ಕಾರಣ ಶಬ್ದ ಹೆಚ್ಚಾಗಿ ಪ್ರಾಣಿಗಳು ಅರಣ್ಯದೊಳಗೆ ಹೋಗಿವೆ, ಪ್ರಧಾನಿ ಮೋದಿಗೆ ಹುಲಿ ಕಾಣಿಸಲಿಲ್ಲ! | JANATA NEWS

ಮೈಸೂರು : ಬಂಡೀಪುರದಲ್ಲಿ ಪ್ರಧಾನಿಗೆ ಹುಲಿ ಕಾಣಲಿಲ್ಲ ಎಂಬ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ವಾಯುಸೇನೆಯ ಮೂರು ಹೆಲಿಕಾಪ್ಟರ್ ಗಳು ಒಂದೇ ಸಮಯಕ್ಕೆ ಬಂದಿದ್ದರಿಂದ ಶಬ್ದ ಹೆಚ್ಚಾಗಿ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿವೆ. ಹಾಗಾಗಿ ಮೋದಿಗೆ ಹುಲಿ ಕಾಣಿಸಲಿಲ್ಲ, ಇಂತಹ ಸಾಮಾನ್ಯ ಜ್ಞಾನ ಕೂಡ ಸಿದ್ದರಾಮಯ್ಯರಿಗೆ ಇಲ್ಲವಲ್ಲಾ ಎಂದು ಕಿಡಿಕಾರಿದರು.
ಮೋದಿಗೆ ವನ್ಯಜೀವಿಗಳ ಬಗ್ಗೆ ಕಾಳಜಿ ಇದ್ದರಿಂದ ಬಂಡೀಪುರಕ್ಕೆ ಹೋದರು. ನೀವು ಪ್ರಧಾನಿಗೆ ಪಾಠ ಮಾಡಬೇಡಿ, ಭ್ರಷ್ಟರ ಪಾಲಿಗೆ ಹುಲಿಯಂತಿದ್ದ ಲೋಕಾಯುಕ್ತವನ್ನೇ ನೀವು ಮುಗಿಸಿದವರಲ್ಲ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಗುಜರಾತ್ ನ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಯಾಕೆ ಕಾಂಗ್ರೆಸಿಗರು ಹೂಳಿಡುತ್ತಾರೆ? ಸಿದ್ದರಾಮಯ್ಯ ಅವರೇ ಈ ಭಯ ನಿಮ್ಮ ಎದೆಯಲ್ಲಿ ಇರಬೇಕು. ಮೇ 10 ರಂದು ಈ ಭಯ ಮತ್ಯಾವಾ ರೀತಿ ಗೋಚರವಾಗುತ್ತದೆ ನೋಡಿ. ಪ್ರಧಾನಿಗಳು ವನ್ಯಜೀವಿಗಳ ಕಾಳಜಿಗಾಗಿ ದೆಹಲಿಯಿಂದ ಬಂಡೀಪುರಕ್ಕೆ ಬಂದರು. ಸಿದ್ದರಾಮಯ್ಯ ಅವರೇ ನೀವು ಸಿಎಂ ಆಗಿದ್ದವರ ಒಂದು ದಿನವೂ ಬಂಡೀಪುರ, ನಾಗರಹೊಳೆ ಹೋಗಲಿಲ್ಲ. ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗ್ತಿದ್ದವರು ನೀವು ನಿಮ್ಮಿಂದ ಪ್ರಧಾನಿಗಳ ಹುಲಿ ಬಗ್ಗೆ ಪಾಠ ಬೇಡ ಎಂದರು