ಬಾಲಕನಿಗೆ ಮುತ್ತಿಟ್ಟು, ತಮ್ಮ ನಾಲಿಗೆ ಚೀಪುವಂತೆ ಹೇಳಿದ ಪ್ರಕರಣ: ಕ್ಷಮೆ ಕೇಳಿದ ದಲೈಲಾಮಾ | JANATA NEWS

ಬೆಂಗಳೂರು : ಟಿಬೆಟಿಯನ್ ಧರ್ಮಗುರು ದಲೈಲಾಮಾ ಬಾಲಕನೊಬ್ಬನಿಗೆ ಮುತ್ತಿಟ್ಟು ತಮ್ಮ ನಾಲಿಗೆ ಚೀಪುವಂತೆ ಕೇಳಿರುವ ವಿಡಿಯೋವೊಂದು ವೈರಲ್ ಆಗಿದ ಬೆನ್ನಲ್ಲೇ ದಲೈಲಾಮಾ ಅವರು ಕ್ಷಮೆ ಕೇಳಿದ್ದಾರೆ.
ಮಗುವಿಗೆ ತನ್ನ ನಾಲಿಗೆ ನೆಕ್ಕುವಂತೆ ಹೇಳಿ ವಿವಾದಕ್ಕೀಡಾಗಿರುವ ಬೌದ್ಧ ಧರ್ಮಗುರು ದಲೈಲಾಮಾ ಅವರು ಈಗ ಕ್ಷಮೆ ಕೇಳಿದ್ದಾರೆ. ಬೌದ್ಧ ಧರ್ಮಗುರು ದಲೈ ಲಾಮಾ ಅವರು ಮಗುವಿನ ತುಟಿಗಳಿಗೆ ಚುಂಬಿಸುತ್ತಿರುವುದನ್ನು ತೋರಿಸುವ ವಿಡಿಯೋ ಮತ್ತು ನಂತರ ತನ್ನ ನಾಲಿಗೆಯನ್ನು ನೆಕ್ಕುವಂತೆ ಕೇಳುತ್ತಿರುವುದನ್ನು ತೋರಿಸುವ ದೃಶ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದಾದ ಬಳಿಕ ಎಲ್ಲೆಡೆ ಬೌದ್ಧಧರ್ಮಗುರುವಿನ ಈ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ವಿಚಾರವೀಗ ವಿವಾದಕ್ಕೀಡಾಗುತ್ತಿದ್ದಂತೆ ಧರ್ಮಗುರುಗಳು ಕ್ಷಮೆ ಕೇಳಿದ್ದಾರೆ. ಬಾಲಕ ಹಾಗೂ ಆತನ ಕುಟುಂಬ ಹಾಗೂ ಜಾಗತಿನಾದ್ಯಂತ ಇರುವ ಬೌದ್ಧ ಅನುಯಾಯಿಗಳಲ್ಲಿ ಈ ಬಗ್ಗೆ ಕ್ಷಮೆ ಕೇಳುತ್ತಿರುವುದಾಗಿ ಅವರು ಟ್ವಿಟ್ ಮಾಡಿದ್ದಾರೆ.
ಸಮಾರಂಭವೊಂದರಲ್ಲಿ ಲಾಮಾಗೆ ಗೌರವ ಸಲ್ಲಿಸಲು ಬಾಲಕನೊಬ್ಬ ಬಾಗಿದಾಗ ದಲೈ ಲಾಮಾ, ಆ ಹುಡುಗನ ತುಟಿಗಳಿಗೆ ಮುತ್ತು ಕೊಟ್ಟಿದ್ದಾರೆ ನಂತರ ಲಾಮಾ ಅವರು ಮಗುವಿಗೆ ನಾಲಿಗೆ ನೆಕ್ಕು ಎಂದು ಹೇಳಿದ್ದು, ಆಗ ದಲೈ ಲಾಮಾ ತಮ್ಮ ನಾಲಿಗೆಯನ್ನು ಎದುರು ಚಾಚಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಸಧ‍್ಯ ಈ ಕುರಿತು ದಲೈ ಲಾಮಾ ಕ್ಷಮೆಯಾಚಿಸಿದ್ದು, ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಧಿಕೃತ ಹೇಳಿಕೆಯಲ್ಲಿ ತನ್ನ ಮಾತುಗಳಿಂದ ಅಪ್ರಾಪ್ತ ವಯಸ್ಕ ಬಾಲಕ ಮತ್ತು ಅವನ ಕುಟುಂಬಕ್ಕೆ ಉಂಟಾದ ನೋವಿಗೆ ವಿಷಾದಿಸುತ್ತೇನೆ ಎಂದು ಹೇಳಿದರು.
ಕ್ಷಮೆಯಾಚಿಸಿದ ಅವರ ಕಚೇರಿಯು ಹೇಳಿಕೆಯಲ್ಲಿ, 'ದಲೈಲಾಮಾ ಅವರು ಮುಗ್ಧ ಮತ್ತು ತಮಾಷೆಯ ರೀತಿಯಲ್ಲಿ ಭೇಟಿಯಾಗುವ ಜನರನ್ನು ಆಗಾಗ್ಗೆ ಕೀಟಲೆ ಮಾಡುತ್ತಾರೆ' ಎಂದು ಹೇಳಿದೆ.