ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯಿಂದಲೇ ಪತ್ನಿ ಕೊಲೆ | JANATA NEWS

ಚಿತ್ರದುರ್ಗ : ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ನಗರದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ಅನೈತಿಕ ಸಂಬಂಧ ಎಲ್ಲಿ ಬಯಲಾಗುತ್ತದೆಯೋ ಎಂದು ತನ್ನ ಪತ್ನಿಯನ್ನು ಹತ್ಯಗೈದು ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದಾನೆ.
ಗೃಹಿಣಿಯಲ್ಲಿ ರೋಜಾ (27) ಎಂದು ಗುರುತಿಸಲಾಗಿದೆ. ಪತಿ ಯರಿಸ್ವಾಮಿಯೇ ಪತ್ನಿ ಕೊಲೆಗೈದ ಪಾತಕಿ ಆಗಿದ್ದಾನೆ. ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಪತಿ ಫೋಟೋ ಗ್ರಾಫರ್ ಆಗಿದ್ದು, ಆರ್ಥಿಕ ಸಮಸ್ಯೆಯೇನೂ ಇರಲಿಲ್ಲ. ಇನ್ನು ಪತ್ನಿ ಗೃಹಿಣಿಯಾಗಿದ್ದಳು.
ಪತಿ ಯರಿಸ್ವಾಮಿ ಬೇರೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿದ್ದನಂತೆ, ಆತನ ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಂಡು ಪ್ರಶ್ನೆ ಮಾಡಿದ್ದಾಳೆ. ತನ್ನ ಗಂಡನ ಅನೈತಿಕ ಸಂಬಂಧ ಇರುವ ಬಗ್ಗೆ ತಿಳಿದು, ಮನೆಯ ಹಿರಿಯರಿಗೂ ತಿಳಿಸಿದ್ದಾಳೆ. ಇನ್ನು ವಿಚಾರ ತಿಳಿದ ಬಳಿಕ ಯುವತಿಯ ಮನೆಯವರು ಕೂರಿಸಿ ರಾಜಿ ಪಂಚಾಯ್ತಿ ಮಾಡಿದ್ದಾರೆ. ನೀನು ಈ ರೀತಿ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದರಂತೆ.
ಯರಿಸ್ವಾಮಿ ಈ ಸ್ವಭಾವ ದಿನೇ ದಿನೇ ಹೆಚ್ಚಾಗಿದ್ದಕ್ಕೆ, ಪತ್ನಿ ಪ್ರಶ್ನೆ ಮಾಡಿ ಜಗಳಾಡಿದ್ದಾಳೆ. ಇದರಿಂದ ಕೋಪಿತಗೊಂಡ ಗಂಡ ತನ್ನ ಅನೈತಿಕ ಸಂಬಂಧ ಎಲ್ಲಿ ಬಯಲಾಗುತ್ತೋ ಎಂದು ಪತ್ನಿ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಳಿಕ ಮನಬಂದಂತೆ ಥಳಿಸಿರೋ ಪರಿಣಾಮ ತೀವ್ರ ರಕ್ತಸ್ರಾವ ಆಗಿದೆ.
ನಂತರ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಮುಂದಾಗಿದ್ದಾನೆ. ಸಂಜೆ ವೇಳೆ ತಾನೇ ಅಕ್ಕ ಪಕ್ಕದವರಿಗೆ ಏನೂ ಗೊತ್ತಾಗಬಾರದು ಎಂದು ನಾಟಕವಾಡಿ ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜಿಲ್ಲಾಸ್ಪತ್ರೆಗೆ ದಾಖಲಿಸುವ ನಾಟಕಮಾಡಿ ಪತಿ ಯರಿಸ್ವಾಮಿ ಪರಾರಿಯಾಗಿದ್ದಾನೆ. ಮೃತ ಮಹಿಳೆ ಕುಟುಂಬಸ್ಥರು ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.