ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ವಯನಾಡ್ ತೆರಳಿದ ಅನರ್ಹಗೊಂಡ ಸಂಸದ ರಾಹುಲ್ ಗಾಂಧಿ | JANATA NEWS

ವಯನಾಡ್ : ಕಾಂಗ್ರೆಸ್ ನಾಯಕನ ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿ ಮಂಗಳವಾರ ಕೇರಳದ ತಮ್ಮ ಹಿಂದಿನ ಕ್ಷೇತ್ರ ವಯನಾಡ್‌ಗೆ ಪ್ರವಾಸ ಕೈಗೊಂಡಿದ್ದಾರೆ. ಅವರ ಭೇಟಿಯ ಸಂದರ್ಭದಲ್ಲಿ ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ತೆರಳಿರುವುದು ವಿಶೇಷವಾಗಿದೆ.
ಇಂದು ರಾಹುಲ್ ಭೇಟಿಯ ವೇಳೆ ಅವರು ವಯನಾಡಿನಲ್ಲಿ ಸಾರ್ವಜನಿಕ ರ್ಯಾಲಿ ಮತ್ತು ರೋಡ್ ಶೋ ನಡೆಸಿದರು.
ಅವರ ಭೇಟಿಯ ಸಮಯದಲ್ಲಿ, ಗಾಂಧಿ ಸಹೋದರಿ-ಸಹೋದರ ಕಲ್ಪೆಟ್ಟಾದಲ್ಲಿ ರೋಡ್ ಶೋ ಮತ್ತು ಸಮಾವೇಶವನ್ನು ನಡೆಸಲು ನಿರ್ಧರಿಸಿದ್ದಾರೆ.
English summary : Disqualified MP Rahul Gandhi went to Wayanad with sister Priyanka Gandhi Vadra