ಜೆಡಿಎಸ್‌ಗೆ ವೈಎಸ್‌ವಿ ದತ್ತಾ, ಕಡೂರು ಕ್ಷೇತ್ರದಿಂದ ವೈಎಸ್‌ವಿ ದತ್ತ ಸ್ಪರ್ಧೆ, ಏ.18 ನಾಮಪತ್ರ ಸಲ್ಲಿಕೆ | JANATA NEWS

ಚಿಕ್ಕಮಗಳೂರು : ಕಡೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವೈ ಎಸ್ ವಿ ದತ್ತಾ ಮರಳಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ.
ವೈ.ಎಸ್.ವಿ ದತ್ತ ಮನೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಇಂದು ಭೇಟಿ ನೀಡಿದರು. ಕಡೂರು ತಾಲೂಕಿನ ಯಗಟಿಯಲ್ಲಿರುವ ದತ್ತ ಅವರ ನಿವಾಸಕ್ಕೆ ತೆರಳಿ ಚರ್ಚಿಸಿದರು. ಕಡೂರಿನಲ್ಲಿ ದತ್ತ ಸ್ಪರ್ಧಿಸಲಿದ್ದಾರೆ ಎಂದು ಈ ವೇಳೆ ರೇವಣ್ಣ ಘೋಷಿಸಿದ್ದಾರೆ.
ದತ್ತಾ ಅವರನ್ನು ಮತ್ತೆ ಜೆಡಿಎಸ್ ಗೆ ಸೇರ್ಪಡೆಗೊಳಿಸುವ ಹಿನ್ನೆಲೆಯಲ್ಲಿ ಹೆಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಯುಗಟಿ ಗ್ರಾಮದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದರು.
ದತ್ತಾ ಜೆಡಿಎಸ್ ಸೇರ್ಪಡೆ ಏನಿಲ್ಲ, ಜೆಡಿಎಸ್ ಅವರಿದ್ದ ಮನೆ. ಇದು ಅವರ ಕಳೆದ 50 ವರ್ಷದ ಮನೆ, ಅವರಿಗೆ ಅವರ ಮನೆಗೆ ಬರೋದಕ್ಕೆ ಏನು. ದತ್ತಾ ಅವರಿಗೆ ಜೆಡಿಎಸ್ ತಂದೆ-ತಾಯಿ ಮನೆ ತರ ಬೇರೆ ಏನು ಅಲ್. ಸೇರೋ ಕಾರ್ಯಕ್ರಮ ಏನಿಲ್ಲ, ಅವರ ಮನೆಗೆ ಅವರು ಬಂದಿದ್ದಾರೆ ಎಂದರು
ದತ್ತಾ ಬಳಿ ಇರೋದು ಎರಡೇ... ಎರಡು... ಒಂದು ಪಂಚೆ, ಒಂದು ಶರ್ಟ್ ಅಷ್ಟೆ. ನಾನೇ ಮಿನಿಸ್ಟರ್ ಆದಾಗ ಕಾರ್ ಕೊಡುಸ್ತೀನಿ ಅಂದೆ. ಬೇಡ ಸರ್. ನಂಗೇ ಆಟೋನೆ ಸಾಕು ಅಂದಿದ್ರು. 18ನೇ ತಾರೀಖು ದತ್ತಾ ನಾಪಪತ್ರ ಸಲ್ಲಿಕೆ ಮಾಡಲಿದ್ದಾರೆ ಅಂದು ಎಷ್ಟೆ ಕಷ್ಟ ಆದ್ರು ದೇವೆಗೌಡರು ಬರುತ್ತಾರೆ, ಬಂದೇ ಬರುತ್ತಾರೆ. ದತ್ತಾ ಅವರ ನಾಮಪತ್ರ ಸಲ್ಲಿಕೆಗೆ ದೇವೇಗೌಡರು ಪಕ್ಕದಲ್ಲಿ ಕೂತಿರ್ತಾರೆ. ನಾನು ಬದುಕಿರುವವರೆಗೇ ದತ್ತಾನ ಕೈ ಬಿಡಬಾರದು ಎಂದು ಹೇಳಿದ್ದಾರೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.