ದೇವಸ್ಥಾನದ ಹುಂಡಿಗೆ ಕಂತೆ ಕಂತೆ ಕಾಣಿಕೆ ಸುರಿದ ಡಿಕೆ ಶಿವಕುಮಾರ್ | JANATA NEWS

ರಾಮನಗರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಬಂದು ಕಬ್ಬಾಳಮ್ಮ ದೇವಿಗೆ ಈಡುಗಾಯಿ ಹರಕೆ ತೀರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ತೆರಳಿ ಇಂದು ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ ಕೆಂಕೇರಮ್ಮ ದೇವಸ್ಥಾನದ ಬಳಿಕ ಕಬ್ಬಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಕುಟುಂಬ ಸಮೇತವಾಗಿ ಪೂಜೆ ಸಲ್ಲಿಸಿದ್ದಾರೆ.
ಕನಕಪುರ ಕ್ಷೇತ್ರದ ಕಬ್ಬಾಳಮ್ಮ ದೇವಿಗೆ ಹರಕೆ ಮಾಡಿಕೊಂಡರೆ ಮನದ ಆಸೆ ಈಡೇರುತ್ತದೆ ಎಂಬ ನಂಬಿಕೆಯನ್ನು ಭಕ್ತರು ಹೊಂದಿದ್ದು, ಡಿಕೆ ಶಿವಕುಮಾರ್ ಅವರು ಕೂಡ ಕಬ್ಬಾಳಮ್ಮ ದೇವಿಯಲ್ಲಿ ಹರಕೆ ಕಟ್ಟಿಕೊಂಡು ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದೇವಸ್ಥಾನದ ಹುಂಡಿಗೆ ಕಾಣಿಕೆ ಹಾಕಲು ಡಿಕೆ ಶಿವಕುಮಾರ್ ಅವರು ಹರಸಾಹಸ ಪಟ್ಟ ಘಟನೆಯೂ ಇದೇ ವೇಳೆ ನಡೆದಿದ್ದು, ದೇವಸ್ಥಾನದ ಹುಂಡಿಯ ಬಾಯಿ ಚಿಕ್ಕದಾಗಿದ್ದ ಕಾರಣ ಡಿಕೆಶಿ ಅವರಿಗೆ ಹಣ ಕಂತೆ ಹಾಕಲು ಸಾಧ್ಯವಾಗಲಿಲ್ಲ. ಕೊನೆಗೆ ಅವರು ಕಂತೆ ಕಂತೆ ನೋಟಿನ ಕಟ್ಟನ್ನು ಭಾಗ ಮಾಡಿ ಕಾಣಿಕೆಯನ್ನು ಹುಂಡಿಕೆ ಹಾಕಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಡಿಕೆಶಿ ರಾಜಕಾರಣ ಅನ್ನೋದು ವ್ಯವಸಾಯ ಇದ್ದಂತೆ. ವ್ಯವಸಾಯದಲ್ಲಿ ಹೇಗೆ ಬಿತ್ತನೆ ಹಾಕಿ, ನೀರು ಹಾಕಿ, ಪೋಷಣೆ ಮಾಡಿ ಬೆಳೆ ತಗೀತ್ತಾರೋ ಹಾಗೇ ಬೆಳೆ ಕಟಾವು ಮಾಡುವ ಸಮಯ ಚುನಾವಣೆಯಲ್ಲಿ ಬಂದಿದೆ. ನಾನು 35 ವರ್ಷಗಳ ಕಾಲ ವ್ಯವಸಾಯದಂತೆ ರಾಜಕಾರಣದಲ್ಲಿ ನೂರಾರು ನಾಯಕರನ್ನು ಬೆಳೆಸಿದ್ದೇನೆ ಎಂದರು.