ರಾಜಕಾರಣಕ್ಕೆ ಮೊಮ್ಮಗ ಎಂಟ್ರಿ; ಮೊಮ್ಮಗ ಧವನ್ ರಾಕೇಶ್ ಜೊತೆ ಬಂದ ಸಿದ್ದರಾಮಯ್ಯ | JANATA NEWS

ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಮೂರನೇ ತಲೆಮಾರು ರಾಜಕೀಯಕ್ಕೆ ಎಂಟ್ರಿ ಆಗಿದ್ದು, ಅಖಾಡಕ್ಕಿಳಿದಿರುವ ಮೊಮ್ಮಗ ಧವನ್ ರಾಕೇಶ್ ತಾತನಿಗೆ ಸಾಥ್ ನೀಡುತ್ತಾ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಮೈಸೂರಿನ ಏರ್‌ಪೋರ್ಟ್‌ನಲ್ಲಿ ತಾತನೊಂದಿಗೆ ಕಾಣಿಸಿಕೊಂಡ ಧವನ್. ರಾಕೇಶ್ ಸಿದ್ದರಾಮಯ್ಯ ಅವರ ಮಗ ಧವನ್ ರಾಕೇಶ್ ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
ಸಿದ್ದರಾಮಯ್ಯ ಮಾತನಾಡಿ, ಮೊಮ್ಮಗನ ಜೊತೆ ಬಂದಿರುವುದರ ಬಗ್ಗೆ ತಿಳಿಸಿದ್ದಾರೆ. ಧವನ್‍ಗೆ ರಾಜಕೀಯದ ಬಗ್ಗೆ ಬಹಳ ಆಸಕ್ತಿ ಇದೆ. ನಾಮಪತ್ರ ಸಲ್ಲಿಕೆ, ಪ್ರಚಾರ ವೈಖರಿ ಎಲ್ಲವನ್ನೂ ತಿಳಿದುಕೊಳ್ಳಲು ಸ್ವಆಸಕ್ತಿಯಿಂದ ನನ್ನ ಜೊತೆ ಬಂದಿದ್ದಾನೆ ಎಂದು ತಿಳಿಸಿದರು.
ಅವನಿಗೆ ಇನ್ನೂ 17 ವರ್ಷ ರಾಜಕೀಯಕ್ಕೆ ಬರಲು ಬಹಳ ಸಮಯವಿದೆ. ನಾಮಪತ್ರ ಸಲ್ಲಿಕೆ, ಪ್ರಚಾರ ವೈಖರಿ ಎಲ್ಲವನ್ನೂ ತಿಳಿದುಕೊಳ್ಳಲು ಸ್ವ ಆಸಕ್ತಿಯಿಂದ ನನ್ನ ಜೊತೆ ಬಂದಿದ್ದಾನೆ. ಇಡೀ ಚಾಮುಂಡೇಶ್ವರಿ, ವರುಣ ಕ್ಷೇತ್ರವನ್ನು ಅವರಪ್ಪ ರಾಕೇಶ್ ನಿರ್ವಹಿಸುತ್ತಿದ್ದ. ರಾಕೇಶನೇ ಇಡೀ ಜಿಲ್ಲೆ ನೋಡಿಕೊಳ್ಳುತ್ತಿದ್ದ. ಈಗ ಮೊಮ್ಮಗ ನನ್ನೊಂದಿಗೆ ಸಾಥ್ ನೀಡುತ್ತಿದ್ದಾನೆ. ಎಷ್ಟಾದರೂ ಅಪ್ಪನ ರಕ್ತ ಅಲ್ವಾ? ಎಂದು ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು.