ಧಾರವಾಡದಲ್ಲಿ 7.7 ಕೆಜಿ ದಾಖಲೆ ಇಲ್ಲದ ಚಿನ್ನಾಭರಣ ವಶಕ್ಕೆ | JANATA NEWS

ಧಾರವಾಡ : ದಾಖಲೆಗಳಿಲ್ಲದೇ ಸಾಗಿಸಲಾಗುತ್ತಿದ್ದ ಬರೋಬ್ಬರಿ 5 ಕೋಟಿ ರೂ. ಮೌಲ್ಯದ 7 ಕೆಜಿ 700 ಗ್ರಾಂ ತೂಕದ ಚಿನ್ನಾಭರಣಗಳನ್ನು ಧಾರವಾಡ ಹೊರವಲಯದ ತೇಗೂರು ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಪ್ರತಿಷ್ಠಿತ ಚಿನ್ನದ ಅಂಗಡಿಗಳಿಗೆ ಸೇರಿದ ದಾಖಲೆ ಇಲ್ಲದ ಚಿನ್ನವನ್ನ ಪೊಲೀಸರು ಜಪ್ತಿ ಮಾಡಿ, ಆದಾಯ ಮತ್ತು ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಧಾರವಾಡದ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
English summary :7.7 kg unrecorded gold jewelery seized in Dharwad