ಕೊನೇ ಗಳಿಗೆಯಲ್ಲಿ ಜೆಡಿಎಸ್ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹಾಗೂ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ | JANATA NEWS

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾದ ಇಂದು ಕೊನೇ ಗಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಿದೆ.
13 ವಿಧಾನಸಭಾ ಕ್ಷೇತ್ರಗಳಿಗೆ ದಳಪತಿಗಳು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದಾರೆ. ಮೊದಲ ಪಟ್ಟಿಯಲ್ಲಿ 93, ಎರಡನೇ ಪಟ್ಟಿಯಲ್ಲಿ 49 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ತನ್ನ ತಾರಾ ಪ್ರಚಾರಕರನ್ನು ಬಹಿರಂಗಪಡಿಸಿದೆ.
ಗೋಕಾಕ್- ಚಂದನ್ ಕುಮಾರ್
ಕಿತ್ತೂರು- ಅಶ್ವಿನಿ ಸಿಂಗಯ್ಯ ಪೂಜೇರಾ
ಯಾದಗಿರಿ- ಎ.ಬಿ. ಮಾಲಕರೆಡ್ಡಿ
ಭಾಲ್ಕಿ- ರೌಫ್ ಪಟೇಲ್
ಶಿಗ್ಗಾಂವಿ- ಶಶಿಧರ್ ಚನ್ನಬಸಪ್ಪ ಯಲಿಗಾರ
ಮೊಳಕಾಲ್ಮೂರು- ಮಹಾದೇವಪ್ಪ
ಪುಲಿಕೇಶಿನಗರ- ಅನುರಾಧ
ಶಿವಾಜಿನಗರ- ಅಬ್ದುಲಾ ಜಫರ್ ಅಲಿ
ಶಾಂತಿನಗರ- ಮಂಜುನಾಥ ಗೌಡ
ಬೆಳ್ತಂಗಡಿ- ಅಶ್ರೂಪ್ ಅಲಿ
ಮಂಗಳೂರು ನಗರ ಉತ್ತರ- ಮೊಯಿನುದ್ದೀನ್ ಭಾವ
ಮಂಗಳೂರು- ಅಲ್ತಾಪ್ ಕುಂಪಾಲ
ಬಂಟ್ವಾಳ- ಪ್ರಕಾಶ್ ರಫಾಯಲ್ ಗೊಮ್ಸ್
ಮೂರನೇ ಪಟ್ಟಿಯಲ್ಲಿ 59 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿತ್ತು. ಆದರೆ 3ನೇ ಪಟ್ಟಿಯಲ್ಲಿ 12 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬದಲಾವಣೆ ಮಾಡಲಾಗಿದ್ದು, 7 ಕ್ಷೇತ್ರಗಳಲ್ಲಿ ಜೆಡಿಎಸ್ ಬಾಹ್ಯ ಬೆಂಬಲ ಘೋಷಿಸಿದೆ.
ಜತೆಗೆ 26 ಮಂದಿಯ ಸ್ಟಾರ್ ಕ್ಯಾಂಪೇನರ್ ಪಟ್ಟಿಯನ್ನೂ ಸಹ ಜೆಡಿಎಸ್ ಬಿಡುಗಡೆ ಮಾಡಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಿ.ಎಂ. ಇಬ್ರಾಹಿಂ, ಎಚ್.ಡಿ. ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಅನಿತಾ ಕುಮಾರಸ್ವಾಮಿ, ಕುಪೇಂದ್ರ ರೆಡ್ಡಿ, ಟಿ.ಎ. ಶರವಣ, ತಿಪ್ಪೇಸ್ವಾಮಿ, ಭೋಜೇಗೌಡ, ಬಿ.ಎಂ. ಫಾರೂಖ್, ಜಫ್ರುಲ್ಲಾ ಖಾನ್, ಭವಾನಿ ರೇವಣ್ಣ, ಅಪ್ಪಾಜಿಗೌಡ, ನಜ್ಮಾ ನಜೀರ್ ಸೇರಿದಂತೆ ಹಲವರು ಪಟ್ಟಿಯಲ್ಲಿದ್ದಾರೆ.