ಶೃಂಗೇರಿಯಲ್ಲಿ ಡಿಕೆ ಶಿವಕುಮಾರ್, ನನ್ನ ಚುನಾವಣೆ ಪ್ರಚಾರ ಈ ಕ್ಷೇತ್ರದಿಂದಲೇ ಆರಂಭಿಸುತ್ತಿದ್ದೀನೆ! | JANATA NEWS

ಚಿಕ್ಕಮಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಶನಿವಾರ ಬೆಳಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಬೆಳ್ತಂಗಡಿಯಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಶೃಂಗೇರಿ ಆಗಮಿಸಿದ್ದು, ಶಾರದ ದೇವಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ, ಇಂದು ಬೆಳಗ್ಗೆ 9 ಗಂಟೆಯಿಂದ 12 ಗಂಟೆವರಗೆ ನಡೆಯಲಿರುವ ಚಂಡಿಕಾ ಯಾಗ ನಡೆಯಲಿದೆ.
ಸುಮಾರು ಹತ್ತಕ್ಕೂ ಹೆಚ್ಚು ಪುರೋಹಿತರನ್ನು ಒಳಗೊಂಡ ತಂಡ ಶೃಂಗೇರಿ ಕ್ಷೇತ್ರದಲ್ಲಿ ಚಂಡಿಕಾಯಾಗ ಕೈ ಗೊಂಡಿದೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ಶೃಂಗೇರಿಯಲ್ಲಿ ಮಾತನಾಡಿ, ಬೆಳಗ್ಗೆ ಮಂಜುನಾಥ ಸ್ವಾಮಿ ದರ್ಶನ ಪಡೆದೆ. ಈಗ ಶಾರದಾಂಬೆ ಪೂಜೆ ಮಾಡಿ ಪ್ರಾರ್ಥಿಸಿದ್ದೇನೆ. ನನ್ನ ಚುನಾವಣೆ ಪ್ರಚಾರ ಈ ಕ್ಷೇತ್ರದಿಂದಲೇ ಆರಂಭಿಸುತ್ತಿದ್ದೀನಿ. ಯಾವ ಯಾಗ ಪೂಜೆ ಮಾಡಬೇಕೆಂಬುದು ಭಕ್ತ ಹಾಗೂ ತಾಯಿಗೆ ಬಿಟ್ಟ ವಿಚಾರ. ಅದು ಬೇರೆ ಯಾರಿಗೂ ಸಂಬಂಧಿಸಿದ್ದಲ್ಲ. ಇಲ್ಲಿ ಯಾವುದೇ ಕಲ್ಮಶವೂ ಇಲ್ಲ ರಾಜಕಾರಣವೂ ಇಲ್ಲ. ಯಾರು ಏನು ಬೇಕಾದರೂ ಪ್ರಾರ್ಥನೆ ಮಾಡಿಕೊಳ್ಳಬಹುದು ಎಂದರು