ಅಣ್ಣಾವ್ರ 95ನೇ ಜಯಂತೋತ್ಸವ, ಸ್ಮಾರಕ ನೋಡಲು ಅಭಿಮಾನಿ ಸಾಗರ! | JANATA NEWS

ಬೆಂಗಳೂರು : ಇಂದು ಅಣ್ಣಾವ್ರ 94ನೇ ಜನ್ಮದಿನವಾಗಿದ್ದು, ಅವರ ಸ್ಮಾರಕ ಇರುವ ಜಾಗಕ್ಕೆ ರಾಜ್ಯದ ನಾನಾ ಭಾಗಗಳಿಂದ ಜನಸಾಗರ ಹರಿದು ಬರುತ್ತಿದೆ.
ಏಪ್ರಿಲ್ 24, ಕನ್ನಡ ಚಿತ್ರರಂಗದ ವರನಟ, ಪದ್ಮಭೂಷಣ, ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು ಜನಿಸಿದ ದಿನ. ರಾಜ್‌ಕುಮಾರ್ ಅವರ ಜನ್ಮದಿನದಂದು ಕಂಠೀರವ ಸ್ಟುಡಿಯೋ ಆವರಣದಲ್ಲಿರೋ ರಾಜ್ ಸಮಾಧಿ ಬಳಿ ಹಬ್ಬದ ವಾತಾವರಣ ನಿರ್ಮಾಣ ಆಗಿರುತ್ತದೆ.
ರಾಜ್ಯದ ನಾನಾ ಭಾಗಗಳಲ್ಲಿ ಕೂಡ ಅಣ್ಣಾವ್ರ 94ನೇ ಜನ್ಮದಿನ ಪ್ರಯುಕ್ತ ಜನತೆ ಬೀದಿ ಬೀದಿಗಳಲ್ಲಿ ಅನ್ನದಾನ, ರಕ್ತದಾನ ಸೇರಿದಂತೆ ನಾನಾ ರೀತಿಯಲ್ಲಿ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತರುತ್ತಾರೆ.
ಹಲವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.
English summary :95th anniversary of Annavra, a sea of fans to see the monument!