ಜಗದೀಶ್ ಶೆಟ್ಟರ್ ಬೆನ್ನಿಗೆ ಚೂರಿ ಹಾಕಿದ್ದಾರೆ, ಅವರನ್ನು ಸೋಲಿಸುವ ಹೊಣೆ ನನ್ನದು! | JANATA NEWS
ಬೆಳಗಾವಿ : ಜಗದೀಶ್ ಶೆಟ್ಟರ್ ಬೆನ್ನಿಗೆ ಚೂರಿ ಹಾಕಿದ್ದಾರೆ. ಅವರನ್ನು ಸೋಲಿಸುವ ಹೊಣೆ ನನ್ನದು, ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿಯವರನ್ನು ಸೋಲಿಸುವ ಜವಾಬ್ದಾರಿ ಕ್ಷೇತ್ರದ ಜನ ತೆಗೆದುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕರೆ ಕೊಟ್ಟರು.
ಶಿವಯೋಗಿ ದೇವಸ್ಥಾನದ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ನೂ ವಿಧಾನ ಪರಿಷತ್ ಅವಧಿ 5 ವರ್ಷ 2 ತಿಂಗಳು ಇದ್ದರೂ ಸಹ ಲಕ್ಷ್ಮಣ ಸವದಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಎಲ್ಲಾ ಅಧಿಕಾರ ಅನುಭವಿಸಿಯೂ ಶೆಟ್ಟರ್ ಬಿಜೆಪಿ ತೊರೆದಿದ್ದಾರೆ. ಇಲ್ಲಿ ಶೆಟ್ಟರ್ ಅವರನ್ನು ಸೋಲಿಸುವ ಜವಬ್ದಾರಿ ನನ್ನದು, ಲಕ್ಷ್ಮಣ ಸವದಿ ಅವರನ್ನು ಸೋಲಿಸುವ ಜವಾಬ್ದಾರಿ ನಿಮ್ಮದು ಎಂದು ಜನರಿಗೆ ಕರೆ ನೀಡಿದ್ದಾರೆ.
ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ನಿಮಗೆ ಇನ್ನೂ ಐದು ವರ್ಷ ಸಮಯವಿತ್ತು ಇಷ್ಟಿದ್ರೂ ಬಿಜೆಪಿ ಬೆನ್ನಿಗೆ ಚೂರಿ ಹಾಕಿದ್ದೀರಿ. ಲಕ್ಷ್ಮಣ ಸವದಿ ಮನೆಗೆ ಹೋಗುವುದು ನಿಶ್ಚಿತ, ಮಹೇಶ್ ಕುಮಟಳ್ಳಿ ಗೆಲ್ಲೋದು ನಿಶ್ಚಿತ. ಇಡೀ ದೇಶ ಬಿಜೆಪಿ, ನರೇಂದ್ರ ಮೋದಿ ಕಡೆ ನೋಡುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಇಡೀ ದೇಶದ ಜನರು ತಿರಸ್ಕಾರ ಮಾಡಿದ್ದಾರೆ.
ಲಕ್ಷ್ಮಣ ಸವದಿ ಯಾರಿಗೂ ಉಪಕಾರ ಮಾಡಿಲ್ಲ, ಅವರ ಮನೆ ತುಂಬಿಕೊಂಡ. ಗಂಡಸಾಗಿದ್ದರೆ ನಾನು ಮಂತ್ರಿಯಾಗಲ್ಲ ಅಂತಾ ಹೇಳಬೇಕಿತ್ತು. ಸ್ವಾಭಿಮಾನಕ್ಕೆ ಪೆಟ್ಟು ಬಿತ್ತು ಅಂತ ಈಗ ಹೇಳ್ತಿದ್ದಾನೆ ಈ ಗಂಡಸ. ಅವನ್ನ ಕೆಡವಿ ಎಲ್ಲಾ ಖಾಲಿ ಮಾಡಿ ಉಗಾರ್ ಫ್ಯಾಕ್ಟರಿ ಕಬ್ಬು ಕಡಿಯಲು ಕಳಸೋಣ ಎಂದು ವಾಗ್ದಾಳಿ ಮಾಡಿದರು.