ಬಸವರಾಜ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಮುಖಾಮುಖಿ! | JANATA NEWS

ಬೆಳಗಾವಿ : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಸ್ಪರ ಭೇಟಿಯಾದರು.
ಇಂದು ಹಾಲಿ ಮತ್ತು ಮಾಜಿ ಸಿಎಂಗಳು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಒಬ್ಬರಿಗೊಬ್ಬರು ಖುಷಿಯಿಂದ ನಗುತ್ತಾ ಕೈ ಕೈ ಕುಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಿದ್ದರಾಮಯ್ಯನವರು ಪ್ರೀತಿಯಿಂದ ಬಸವರಾಜ ಬೊಮ್ಮಾಯಿಯವರ ಹೆಗಲು ತಟ್ಟಿದ್ದಾರೆ.
ನಂತರ, ಚುನಾವಣಾ ಪ್ರಚಾರ ಕಾರ್ಯಗಳ ಬಗ್ಗೆ ವಿಚಾರಣೆ ಮಾಡಿಕೊಳ್ಳುತ್ತಾ, ಮುಂದೆ ತಾವು ಪ್ರಚಾರ ಕಾರ್ಯಕ್ಕೆ ಹೋಗುವ ವಿವರವನ್ನು ಪಡೆದರು. ಇನ್ನು ಬಸವರಾಜ ಬೊಮ್ಮಾಯಿ ಅವರು ಹೊರಡುವಾಗ ಅವರಿಗೆ ಸಿದ್ದರಾಮಯ್ಯ ಅವರು ಬೆನ್ನು ತಟ್ಟಿ ಕಳುಹಿಸಿಕೊಟ್ಟರು.
RELATED TOPICS:
English summary :Basavaraja Bommayi and Siddaramaiah face to face!