ಇಟ್ಟಿಗೆಯಿಂದ ತಂದೆಯನ್ನು ಹತ್ಯೆ ಮಾಡಿದ ಮಗ | JANATA NEWS

ಬೆಂಗಳೂರು : ತನಗೆ ಕುಡಿಯಲು ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ತಂದೆಯನ್ನೇ ಪುತ್ರನೋರ್ವ ಹತ್ಯೆಗೈದ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯನಗರದ ಮಾರೇನಹಳ್ಳಿಯ ಪಿಎಸ್ ಬಡಾವಣೆ ನಿವಾಸಿಯಾದ ಬಸವರಾಜು(60) ಮೃತ ದುರ್ದೈವಿ. ಪೈಂಟರ್ ಹಾಗೂ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಗ ನೀಲಾಧರ(30) ಕೊಲೆ ಆರೋಪಿ.
ಸೆಕ್ಯೂರಿಟಿ ಗಾರ್ಡ್ ಆಗಿ ಬಸವರಾಜ ಕೆಲಸ ಮಾಡುತ್ತಿದ್ದರು. ತಂದೆ-ಮಗ ಶೆಡ್ವೊಂದರಲ್ಲಿ ಒಟ್ಟಿಗೆ ವಾಸವಾಗಿದ್ದರು. ಮಗ ನೀಲಾಧರ ಕುಡಿಯಲು ಹಣ ಕೇಳಿದ್ದಾನೆ. ಇದಕ್ಕೆ ಒಪ್ಪದ ತಂದೆಯನ್ನು ಮಗ ಇಟ್ಟಿಗೆಯಿಂದ ಅಮಾನುಷವಾಗಿ ಹೊಡೆದು ಕೊಲೆ ಮಾಡಿದ್ದಾನೆ.
ಘಟನೆ ನಡೆದ ಎರಡು ದಿನಗಳ ಬಳಿಕ ಬಸವರಾಜು ವಾಸವಿದ್ದ ಶೆಡ್ನಿಂದ ವಾಸನೆ ಬರಲು ಆರಂಭಿಸಿದ ನಂತರ ನೆರೆಹೊರೆಯವರು ಪರಿಶೀಲಿಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ವೇಳೆ ಪೊಲೀಸರು ನೀಲಾಧರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದು ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡು ಇಟ್ಟಿಗೆಯಿಂದ ತನ್ನ ತಂದೆಯ ಎದೆ ಭಾಗಕ್ಕೆ ಹೊಡೆದಿದ್ಧಾಗಿ ಬಾಯ್ಬಿಟ್ಟಿದ್ಧಾನೆ.