ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್ ಕೈತಪ್ಪಲು ಬಿಎಲ್ ಸಂತೋಷ್ ಕಾರಣ: ಶೆಟ್ಟರ್ ಗಂಭೀರ ಆರೋಪ! | JANATA NEWS

ಹುಬ್ಬಳ್ಳಿ : ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್ ಕೈತಪ್ಪಲು ಬಿಎಲ್ ಸಂತೋಷ್ ಕಾರಣ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಮತ್ತೊಮ್ಮೆ ಬಿ.ಎಲ್ ಸಂತೋಷ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿ.ಎಲ್. ಸಂತೋಷ್ ಅವರೇ ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್ ಕೈತಪ್ಪಿಸಿದ್ದು, ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವುದು ಬಿಡಲಿ. ನೇರವಾಗಿ ನನ್ನ ಜೊತೆ ಯುದ್ಧಕ್ಕೆ ಬರಲಿ. ಬಿ.ಎಲ್. ಸಂತೋಷ್‌ಗೆ ಡೈರೆಕ್ಟ್ ಫೈಟ್ ಮಾಡುವ ಸ್ವಭಾವವಿಲ್ಲ. ಹಿಂಬಾಗಿಲ ರಾಜಕೀಯ ಮಾಡುವುದೇ ಇವರ ಸ್ವಭಾವ. ಬಿ.ಎಲ್. ಸಂತೋಷ್ ಬಗ್ಗೆ ರಾಷ್ಟ್ರದಲ್ಲಿ ಮೊದಲು ಧ್ವನಿ ಎತ್ತಿದವನೇ ನಾನು, ಬಹಳಷ್ಟು ಜನ ಫೋನ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ನಾನು ಬಿಜೆಪಿಯಲ್ಲಿದ್ದಿದ್ದರೆ ನಂಬರ್ ಒನ್ ನಾಯಕನಾಗುತ್ತಿದ್ದೆ. ಪ್ರತಿಸ್ಪರ್ಧಿ ಆಗುತ್ತೇನೆ ಅನ್ನೋ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡಿದರು. ಲಿಂಗಾಯತ ನಾಯಕತ್ವವಿಲ್ಲದೆ ಸರ್ಕಾರ ರಚಿಸಿದ್ದನ್ನು ತೋರಿಸಬೇಕಿತ್ತು. ಆ ಹಿನ್ನೆಲೆಯಲ್ಲಿ ಇದೆಲ್ಲ ನಡೆಯುತ್ತಿದೆ. ಶೆಟ್ಟರ್ ನಾಯಕತ್ವ ಕೊನೆಗಾಣಿಸಲು ಷಡ್ಯಂತ್ರ ನಡೆಯುತ್ತಿತ್ತು. ಕೆಲವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಕೆಲವರಿಗೆ ಅಡ್ಡಿ ಆಗುತ್ತೇನೆ ಅಂತಾ ನನ್ನ ವಿರುದ್ಧ ನೆಗೆಟಿವ್ ಪ್ರಚಾರ ಮಾಡಿದರು ಎಂದರು.
ಬಿಜೆಪಿ ನನಗೆ ಟೀಕಿಸಿದಷ್ಟು ನಾನು ಜಯದ ಹತ್ತಿರ ಹೋಗುತ್ತೇನೆ. ನಾನು ಎಲ್ಲವನ್ನೂ ಫೇಸ್ ಮಾಡುತ್ತಿದ್ದೇನೆ, ಐತಿಹಾಸಿಕ ಗೆಲುವು ಸಾಧಿಸುತ್ತೇನೆ. ಶೆಟ್ಟರ್ ಮುಖ ನೋಡಿ ಓಟ್ ಹಾಕ್ತೀವಿ ಅನ್ನೋ ಭಾವನೆ ಜನರಲ್ಲಿ ಬರುತ್ತಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ಚಾಲೆಂಜ್‌ನನ್ನು ಜನರೇ ಸ್ವೀಕರಿಸುತ್ತಿದ್ದಾರೆ. ಎಲ್ಲರೂ ನಮ್ಮನ್ನು ಗೆಲ್ಲಿಸಿ ಅಂತಾ ಕ್ಯಾಂಪೇನ್ ಮಾಡಿದರೆ. ಬಿಜೆಪಿಯವರು ಶೆಟ್ಟರ್ ಸೋಲಿಸಿ ಅಂತಾ ಕ್ಯಾಂಪೇನ್ ಮಾಡ್ತಿದ್ದಾರೆ. ಹೀಗಾಗಿ ಜನರಲ್ಲಿ ಸಿಂಪಥಿ ಕ್ರಿಯೇಟ್ ಆಗಿದೆ. ಜಗದೀಶ್ ಶೆಟ್ಟರ್ ಮಾತ್ರವಲ್ಲ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಅಂತಾ ಅಂದ್ಕೋತಿದಾರೆ. ಪಕ್ಷ ಬಿಟ್ಟು ಹೊರಗೆ ಹೋದಮೇಲೆ ಶೆಟ್ಟರ್ ಶಕ್ತಿ ಏನಂತಾ ಗೊತ್ತಾಗಿದೆ ಎಂದಿದ್ದಾರೆ.