ಸಿದ್ದರಾಮಯ್ಯನವರು ಸೋಲಿನ ಭೀತಿಗೆ ಸಿಲುಕಿ ಹತಾಶರಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ! | JANATA NEWS

ಬೆಂಗಳೂರು : ವರುಣ ಕ್ಷೇತ್ರದಲ್ಲಿ ಸೋಲಿನ ಭೀತಿಗೆ ಸಿಲುಕಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಹತಾಶರಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸೋಲುವ ಭೀತಿಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಹಲ್ಲೆ ಮಾಡುತ್ತಿದೆ. ಇದು ಖಂಡನೀಯ, ಚುನಾವಣೆ ಚುನಾವಣೆಯಂತೆ ಎದುರಿಸಿ, ಗೂಂಡಾಗಿರಿ ಮಾಡಬೇಡಿ, ನೀವು ಸಿಎಂ ಆಗಿದ್ದಾಗ ಕೆಲಸ ಮಾಡಿದ್ದರೆ ಈ ರೀತಿ ಗೂಂಡಾಗಿರಿ ಮಾಡಬೇಕಾದ ಸ್ಥಿತಿ ಬರಿತರತಿರಲಿಲ್ಲ, ಅಲ್ಲಿ ನಮ್ಮ ಕಾರ್ಯಕರ್ತರ ಭಯಪಡಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.
ಇದು ಖಂಡನೀಯ, ಚುನಾವಣೆಯನ್ನು ಚುನಾವಣೆಯಂತೆ ಎದುರಿಸಿ, ಗೂಂಡಾಗಿರಿ ಮಾಡಬೇಡಿ. ನೀವು ಸಿಎಂ ಆಗಿದ್ದಾಗ ಕೆಲಸ ಮಾಡಿದ್ದರೆ ಈ ರೀತಿ ಗೂಂಡಾಗಿರಿ ಮಾಡಬೇಕಾದ ಸ್ಥಿತಿ ಬರುತ್ತಿರಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಸಂಸ್ಕೃತಿಯೇ ಮೋದಿ ಅವರನ್ನು ಟೀಕಿಸುವುದಾಗಿದೆ. ಪಿಎಂ ಸ್ಥಾನ ನೆಹರೂ ಕುಟುಂಬದ ಆಸ್ತಿ ಎನ್ನುವಂತಾಗಿದೆ, ಅವರ ಆಸ್ತಿಯನ್ನು ಯಾರೋ ಕಬಳಸಿದಂತಾಗಿದೆ ಹೀಗಾಗಿ ಅವರು ಮೋದಿ ವಿರುದ್ಧ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ರಕ್ತ, ವಿಚಾರ ಮತ್ತು ಸಂಸ್ಕೃತಿಯೇ ಮೋದಿಯನ್ನು ಟೀಕಿಸುವುದಾಗಿದೆ. ಪ್ರಧಾನಿ ಸ್ಥಾನ ನೆಹರೂ ಕುಟುಂಬದ ಆಸ್ತಿ ಎನ್ನುವಂತಾಗಿದೆ. ಮೋದಿ ಪ್ರಧಾನಿಯಾಗಿರುವುದರಿಂದಾಗಿ ನೆಹರೂ ಕುಟುಂಬದ ಆಸ್ತಿಯನ್ನು ಯಾರೋ ಕಬಳಿಸಿದಂತಾಗಿದೆ. ಹಾಗಾಗಿ ಅವರು ಮೋದಿ ವಿರುದ್ಧ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ. ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರ ಮೋದಿ ವಿರುದ್ಧ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿ. ಇದಕ್ಕೆ ಜನ ಪಾಠ ಕಲಿಸಲಿದ್ದಾರೆ. ಚುನಾವಣೆಯಂದು ಉತ್ತರ ನೀಡಲಿದ್ದಾರೆ ಎಂದರು.