15 ದಿನಗಳ ನಂತ್ರ ಸರ್ಕಾರ ಇರಲ್ಲ, ನಿಮಗೆ ಏನ್ ಶಿಕ್ಷೆ ಕೊಡ್ಬೇಕು ನೋಡ್ತೀವಿ ಅಂತ ಎಚ್ಚರಿಕೆ | JANATA NEWS

ಬೆಂಗಳೂರು : ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಪರವಾಗಿ ಪ್ರಚಾರ ನಡೆಸಲು ಯಲಹಂಕಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಂದಿ ವೇಳೆ ಡಿಕೆಶಿ ಪೊಲೀಸರಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗುತ್ತಿದೆ.
“ಇನ್ನು 15 ದಿನದಲ್ಲಿ ಈ ಸರ್ಕಾರ ರಾಜ್ಯದಲ್ಲಿ ಇರೋದಿಲ್ಲ. ಅದಾದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗ ನಿಮಗೆ ಏನ್ ಶಿಕ್ಷೆ ಕೊಡಬೇಕೋ ಅದಕ್ಕೆ ಕಾಂಗ್ರೆಸ್ ಬದ್ಧವಾಗಿರುತ್ತೆ” ಅಂತ ಎಚ್ಚರಿಕೆ ನೀಡಿದ್ದಾರೆ. ಹೀಗೆ ಪೊಲೀಸರಿಗೆ ಡಿಕೆ ಶಿವಕುಮಾರ್ ಆವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಲ್ಲಿನ ಶಾಸಕರು ಅಧಿಕಾರಿಗಳು ಮತ್ತು ಪೊಲೀಸರು ನಮ್ಮಕಾರ್ಯಕರ್ತರಿಗೆ ಕಿರುಕುಳ ಕೊಟ್ಟು ಬಿಜೆಪಿ ಬಾವುಟ ಕಟ್ಟುವಂತೆ ಹೇಳುತ್ತಿದ್ದಾರೆ. 15 ದಿನಗಳ ನಂತರ ನಿಮ್ಮ ಸರ್ಕಾರ ಇರಲ್ಲ, ನಿಮಗೆ ಕೊಡಬೇಕಾದ ಶಿಕ್ಷೆಯನ್ನು ಈ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷ ಕೊಡುತ್ತದೆ. ಅಧಿಕಾರಗಳೇ, ಪೊಲೀಸರೆ ನಿಮಗೆ ಖಾಕಿ ಬಟ್ಟೆ ಹಾಕಿಕೊಂಡು ಇರಲಿಕ್ಕೆ ಆಗದಿದ್ದರೆ, ನಿಮಗೆ ತಾಕತ್ತು ಇದ್ದರೆ ರಾಜೀನಾಮೆ ಕೊಟ್ಟು, ಬಿಜೆಪಿ ಬಾವುಟ ಹಾಕಿಕೊಂಡು ಕೆಲಸ ಮಾಡಿ ಎಂದು ಎಚ್ಚರಿಕೆ ಕೊಟ್ಟರು.