Wed,Apr24,2024
ಕನ್ನಡ / English

ರಾತ್ರಿ ಮಟನ್ ತಿಂದು, ಹಗಲಿನಲ್ಲಿ ನಾನ್ ವೆಜಿಟೇರಿಯನ್​ಗೆ ಬೈತಾರೆ: ಖರ್ಗೆ ಲೇವಡಿ | JANATA NEWS

03 May 2023
1848

ಕಲಬುರಗಿ : ರಾತ್ರಿ ಚೆನ್ನಾಗಿ ಮಟನ್ ತಿಂದು, ಬೆಳಗ್ಗೆ ಆದ ಕೂಡಲೇ ನಾನ್ ವೆಜ್ ತಿನ್ನೋರ ಬಗ್ಗೆ ಕೆಟ್ಟದಾಗಿ ಮಾತನಾಡೋದು ಹಾಗೂ ಅವರ ಮೇಲೆ ಎಗರಾಡೋರು ನೀವು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.

ಬಜರಂಗದಳ ರದ್ದು ವಿಚಾರ ಕುರಿತು ಮಾತನಾಡಿ, ಅದರ ಬಗ್ಗೆ ಪ್ರಣಾಳಿಕೆ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಆ ಕುರಿತು ಚರ್ಚೆ ಮಾಡಲು ಹೋಗಲ್ಲ ಎಂದು ತಿಳಿಸಿದರು.

ಬಿಜೆಪಿಯವರು ರಾತ್ರಿ ಹೊತ್ತಿನಲ್ಲಿ ಮಟನ್ ತಿಂದು ಬೆಳಗ್ಗೆ ಎದ್ದ ನಂತರ ನಾನ್ ವೆಬ್ ತಿನ್ನೋವರನ್ನು ಬೈಯ್ಯುತ್ತಾರೆ. ದಿನವಿಡೀ ಮಾಂಸಾಹಾರಿಗಳನ್ನು ಬೈಯ್ಯುವುದೇ ಇವರ ಕೆಲಸವಾಗಿರುತ್ತದೆ. ಆದರೆ, ರಾತ್ರಿ ಹೊತ್ತು ಅವರೇ ನಾನ್ ವೆಜ್ ಚೆನ್ನಾಗಿ ತಿನ್ನುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪ್ರತಿ ವಿರೋಧ ಪಕ್ಷದವರು ಸಹಜವಾಗಿ ಒಬ್ಬರ ಮೇಲೆ ಒಬ್ಬರು ಹೇಳ್ತಾರೆ. ಅದೇ ರೀತಿ ಕಾಂಗ್ರೆಸ್ ಪ್ರಣಾಳಿಕೆ ಜಾರಿ ಮಾಡಲು ಆಗಲ್ಲಾ ಅಂತ ಹೇಳ್ತಿದ್ದಾರೆ. ಕಳೆದ ಬಾರಿ ಕೂಡಾ ಇದೇ ರೀತಿ ಹೇಳಿದ್ದರು. ಆದರೆ ಕಳೆದ ಬಾರಿ ನಾವು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದ್ದೆವು. ಬಜೆಟ್ ಅನುದಾನ, ಆದಾಯ ನೋಡಿಯೇ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅವರು ಹೇಳ್ತಾ ಹೋಗ್ತಾರೆ. ಆದರೆ ನಾವು ಮಾಡಿ ತೋರಿಸುತ್ತಿದ್ದೇವೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.

ಇದೇ ವೇಳೆ, ಸಂಘಪರಿವಾರದ ನಾಯಕರ ವರ್ತನೆಯ ಬಗ್ಗೆ ಅಸಮಾಧಾನ ಹೊರಹಾಕಿದ ಖರ್ಗೆ, ಕಾಂಗ್ರೆಸ್ ಏನೇ ಹೇಳಿದರೂ ಅದನ್ನು ತಿರುಚಿಕೊಂಡು ಅದಕ್ಕೆ ಬೇರೊಂದು ಬಣ್ಣ ಹಚ್ಚುವುದೇ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ಕೆಲಸವಾಗಿದೆ. ಈಗ ಭಜರಂಗದಳದ ವಿಚಾರದಲ್ಲೂ ಹಾಗೇ ಆಗುತ್ತಿದೆ ಎಂದರು

ಕೆಲವರಿಗೆ ಪ್ರಚಾರ ಬೇಕು, ಪ್ರಚಾರದಿಂದಲೇ ಎಲ್ಲಾ ಸಿಗುತ್ತೆ ಅಂತ ಅಂದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಚುನಾವಣೆ ಅನ್ನೋದು ವಾರ್ ಇದ್ದಂತೆ. ನನಗೆ ಹಿಂಗ ಅಂದ್ರು ಹಂಗ ಅಂದ್ರು ಅಂತ ಅಳುತ್ತಾ ಕೂತುಕೋದಿಲ್ಲಾ. ಇದೇ ಬಿಜೆಪಿಯವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ?. ಮುಂಜಾನೆ ಯಿಂದ ಸಂಜೆವರಗೆ ಅಳ್ತಾನೇ ಇರೋದು ಪ್ರಧಾನಿ ಕೆಲಸನಾ?. ನಾನು ಮೋದಿಗಿಂತ ಜಾತಿ ವ್ಯವಸ್ಥೆ ಯಲ್ಲಿ ಕೆಳಗೆ ಇದ್ದೀನಿ. ನಾನು ದಲಿತ ಜಾತಿಗೆ ಸೇರಿದವನು. ಮೋದಿ ಮತ್ತು ಶಾ ಅವರು ಯಾವ ರಾಜ್ಯಕ್ಕೆ ಎಷ್ಟು ಸಲ ಹೋಗಿದ್ದಾರೆ. ಅವರು ಹಣಬಲ, ಮಜಲ್ ಪವರ್ ಹೊಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

RELATED TOPICS:
English summary :Eat mutton at night, feed non-vegetarians during the day: Kharge teases

ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ
ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ
ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ
ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ
ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ
ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ
ಪ್ರಧಾನಿ ಮೋದಿ ಬೆಂಬಲಿಸಿ ಮಹಾರಾಷ್ಟ್ರ ರ್ಯಾಲಿಯಲ್ಲಿ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ
ಪ್ರಧಾನಿ ಮೋದಿ ಬೆಂಬಲಿಸಿ ಮಹಾರಾಷ್ಟ್ರ ರ್ಯಾಲಿಯಲ್ಲಿ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ

ನ್ಯೂಸ್ MORE NEWS...