ಬಜರಂಗದಳವನ್ನು ನಿಷೇಧ ಮಾಡಲು ಕಾಂಗ್ರೆಸ್ ಗೆ ಅವಕಾಶ ಯಾರು ಕೊಡುತ್ತಾರೆ? | JANATA NEWS

ಮೈಸೂರು : ಬಜರಂಗದಳವನ್ನು ನಿಷೇಧ ಮಾಡಲು ಅವರಿಗೆ ಅವಕಾಶ ಯಾರು ಕೊಡುತ್ತಾರೆ? ಎಂದು ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಪರ ಪ್ರಚಾರದಲ್ಲಿ ಭಾಗಿಯಾಗಿದ್ದ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ನಿರ್ಧಾರದ ಕುರಿತು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾನೇ ಬಜರಂಗದಳವನ್ನು ನಿಷೇಧ ಮಾಡೋದು ಎಂದು ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು.
"ಬಜರಂಗದಳವನ್ನು ನಿಷೇಧ ಮಾಡಲು ಅವರಿಗೆ ಅವಕಾಶ ಯಾರು ಕೊಡುತ್ತಾರೆ? ಬಜರಂಗದಳವು ದೇಶಭಕ್ತ ಸಂಘಟನೆ. ಹಿಂದೂಪರ ಕಾಳಜಿ ಇರುವ ಸಂಘಟನೆ. ಅಂತಹ ಸಂಘಟನೆ ಬಗ್ಗೆ ಕಾಂಗ್ರೆಸ್ ಪಕ್ಷ ಮನಬಂದಂತೆ ಮಾತನಾಡಿದರೆ ರಾಜ್ಯದ ಜನರು ಚುನಾವಣೆ ಯಲ್ಲಿ ಬುದ್ಧಿ ಕಲಿಸುತ್ತಾರೆ," ಎಂದು ವಾಗ್ದಾಳಿ ನಡೆಸಿದರು.