ಬೆಂಗಳೂರಿಗೆ ಪ್ರತ್ಯೇಕ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್ | JANATA NEWS

ಬೆಂಗಳೂರು : ಜಾತ್ಯಾತೀತ ಜನತಾದಳ (JDS) ಪಕ್ಷವು ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕವಾಗಿ 'ಜನತಾ ಪ್ರಣಾಳಿಕೆ 2023' ಬಿಡುಗಡೆ ಮಾಡಿದೆ. ಈ ಮೂಲಕ ನಗರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿರುವುದಾಗಿ ಪಕ್ಷ ಹೇಳಿಕೊಂಡಿದೆ.
ಪದ್ಮನಾಭನಗರ ನಿವಾಸದಲ್ಲಿ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೆಗೌಡ, ಎಚ್‌ಡಿ ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಜನತಾ ಪ್ರಣಾಳಿಕೆ ಪುಸ್ತಕವನ್ನ ಬಿಡುಗಡೆ ಮಾಡಿದ್ದಾರೆ.
ಜೆಡಿಎಸ್ನ ಪ್ರಣಾಳಿಕೆಯಲ್ಲಿ ಮುಖ್ಯವಾಗಿ 8 ಭರವಸೆ-
ಸಾಮಾಜಿಕ ಭದ್ರತೆಗಳು ಮತ್ತು ಆರೋಗ್ಯ ಶ್ರೀರಕ್ಷೆ
ಮಹಾನಗರ ಪಾಲಿಕೆ ಆಡಳಿತ ಸುಧಾರಣೆ
ಶಿಕ್ಷಣ
ಆರೋಗ್ಯ
ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ
ನಗರದಲ್ಲಿ ಹಸಿರಿಕರಣ ಮತ್ತು ಅರಣ್ಯೀಕರಣ
ನಗರದಲ್ಲಿನ ಕಣಿವೆ, ಕೆರೆಗಳ ಸಂರಕ್ಷಣೆ, ಕಾಲುವೆಗಳ ಪುನಶ್ಚೇತನ
ಕೋರಮಂಗಲ – ಚೆಲ್ಲಗಘಟ್ಟ ವ್ಯಾಲಿ ಏತ ನೀರಾವರಿ ಯೋಜನೆಯ ಆಧುನಿಕರಣ
ಬೆಂಗಳೂರಿನ ಜನತೆಗಾಗಿ ಜೆಡಿಎಸ್ ತರಲಿರುವ ಯೋಜನೆಗಳು
* 'ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಶ್ರೀರಕ್ಷೆಯಡಿ' ಬಡವರಿಗೆ-ಕಾರ್ಮಿಕರಿಗೆ ಮನೆ ಕಲ್ಪಿಸಿಕೊಡಲಾಗುವುದು.
* ವಿವಿಧ ಯೋಜನೆಗಳಡಿ ಮಕ್ಕಳು ಸೇರಿದಂತೆ ಎಲ್ಲರಿಗೆ ನಿಯತಕಾಲಿಕವಾಗಿ ಉಚಿತ ಲಸಿಕೆ.
* ಮಾಸಿಕ 10ಕೆ.ಜಿ. ಅಕ್ಕಿ ಉಚಿತ ವಿತರಣೆ.
* ರಾಜ್ಯದಲ್ಲಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗುವುದು.
* ಖಾಸಗಿ ಶಾಲಾ ಶಿಕ್ಷಕರಿಗೆ, ಆಟೋ ಚಾಲಕರಿಗೆ, ಬೀದಿ ದೀಪಗಳಿಗೆ ಮತ್ತು ವ್ಯಾಪಾರಿಗಳಿಗೆ ಭದ್ರತೆ
* ಬೆಂಗಳೂರು ನಗರದಲ್ಲಿ ಶೌಚಾಲಯ ವ್ಯವಸ್ಥೆ
* ಶೌಚ ಗುಂಡಿ ಕರ ಸ್ವಚ್ಛತೆ ನಿರ್ಮೂಲನೆ
ಮಹಾನಗರ ಪಾಲಿಕೆ ಆಡಳಿತ ಸುಧಾರಣೆ
* ಹದಗೆಟ್ಟ ಪಾಲಿಕೆ ಆಡಳಿತ ಸುಧಾರಣೆಗೆ ಸರಳ ವ್ಯವಸ್ಥೆ ಜಾರಿ.
* ತೆರಿಗೆ ವಂಚಿತರ ವಿರುದ್ಧ ವಸೂಲಾತಿಗೆ ಕ್ರಮ
* ಎಲ್ಲ ಕಾಮಗಾರಿಗಳ ಆರಂಭಕ್ಕೆ ಅಗತ್ಯ ಕ್ರಮ ಮತ್ತು ಟೆಂಡರ್ ಆಹ್ವಾನಕ್ಕೆ ಕ್ರಮ.
* 110 ಹಳ್ಳಿಗಳಿಗೆ ಪೈಪ್‌ಲೈನ್ ವಿಸ್ತರಿಸಿ ಕಾವೇರಿ ನೀರು ಪೂರೈಕೆಗೆ ಕ್ರಮ
* ತ್ಯಾಜ್ಯ ನಿರ್ವಹಣೆ-ವಿಲೇವಾರಿಗೆ ಕ್ರಮ, ಮರುವಿನ್ಯಾಸಗೊಳಿಸುವುದು.
ಶಿಕ್ಷಣವೇ ಆಧುನಿಕ ಶಕ್ತಿ
* ಪಂಚರತ್ನ ಯೋಜನೆ ಅಡಿಯಲ್ಲಿ ಶಾಲಾ ಆಡಳಿತ ಸುಧಾರಣೆ.
* ಜಿಲ್ಲಾ ಶಾಲಾ ಶಿಕ್ಷಣ ಪರಿಷತ್ ಸ್ಥಾಪನೆ
* ಹೊಸ ಶಿಕ್ಷಣ ನೀತಿಯನ್ನು ಮದರಸಾ, ಅಲ್ಪಸಂಖ್ಯಾತ ಸಮುದಾಯ ನಿರ್ವಹಣೆಯ ಶಾಲೆ ಒಳಗೊಂಡಂತೆ ಎಲ್ಲ ಶಾಲೆಗಳಲ್ಲಿ ಕಡ್ಡಾಯ ಜಾರಿಗೆ ಕ್ರಮ
* ಸರ್ಕಾರಿ ವಲಯದ ಶಾಲೆಗಳ ಅಭಿವೃದ್ಧಿಗೆ ಕ್ರಮ
ಆರೋಗ್ಯ ಶ್ರೀರಕ್ಷೆಗೆ ಜೆಡಿಎಸ್ ಭರವಸೆ
* ಸಾರ್ವಜನಿಕ ಆರೋಗ್ಯ ದೃಷ್ಟಿಕೋನ ಮತ್ತು ರೋಗ ನಿವಾರಕ ದೃಷ್ಟಿಕೋನದಲ್ಲಿ ನಗರದ ನಾಗರಿಕರ ಆರೋಗ್ಯ ಕಾಪಾಡಲಾಗುವುದು.
* ತ್ಯಾಜದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುವುದು.
* ಪ್ರತಿ ವಾರ್ಡ್‌ನಲ್ಲಿ 30ಹಾಸಿಗೆ ವುಳ್ಳ ಸುಸಜ್ಜಿತ ಆಸ್ಪತ್ರೆ ಸ್ಥಾಪನೆ
* ಈ ಆಸ್ಪತ್ರೆಗಳಲ್ಲಿ 24x7 ನಿರಂತರ ಆರೋಗ್ಯ ಸೇವೆ ಲಭ್ಯವಾಗುಂತೆ ಮಾಡುವುದು.
* ನಗರದ ಸ್ವಚ್ಛವಾಗಿಡಲು ಲಭ್ಯವಿರುವ ತಂತ್ರಜ್ಞಾನ ಕುರಿತು ಪ್ರತಿ ವರ್ಷ ನಗರಾದ್ಯಂತ ವಸ್ತು ಪ್ರದರ್ಶನ ಆಯೋಜಿಸಲಾಗುವುದು.
* ಬೆಂಗಳೂರು ಸಾರ್ವಜನಿಕರ ಆರೋಗ್ಯ ಮಂಡಳಿ ರಚನೆ.
ಕೆರೆ ಕಣಿವೆಗಳ ಸಂರಕ್ಷಣೆ-ರಾಜಕಾಲುವೆ ಪುನಶ್ಚೇತನ
* ರಾಜಕಾಲುವೆ ಒತ್ತುವರಿ ತೆರವು ಮಾಡಿ ನಗರ ಪುನರ್ ನಿರ್ಮಾಣ
* ನಗರದ ಕುಡಿಯುವ ನೀರಿನ ಕ್ಷಾಮ ಬಗೆಹರಿಸಲು ಕ್ರಮ
* ಕೋರಮಂಗಲ ಮತ್ತು ಚೆಲ್ಲಘಟ್ಟ ವ್ಯಾಲಿ ಏತ ನೀರಾವರಿ ಯೋಜನೆ ಆಧುನಿಕರಣ
* ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಸಲು ಭಗೀರಥ ಪ್ರಯತ್ನ.
ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ
* ಮುಂಬೈ, ಹೈದರಾಬಾದ್, ಚೆನ್ನೈ ನಗರಗಳಂತೆ ಬೆಂಗಳೂರಿನಲ್ಲಿ ಕೇಂದ್ರ ರೈಲ್ವೆ ಇಲಾಖೆ ಸಹಕಾರದಲ್ಲಿ ವಿವಿಧ ಭಾಗದಲ್ಲಿ ರೈಲ್ವೆ ಅಭಿವೃದ್ಧಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶ.
* ನಮ್ಮ ಮೆಟ್ರೋ ಎಡ-ಬಲ ಪಾರ್ಶ್ವದ ಪ್ರದೇಶಗಳ ವಿಸ್ತರಣೆ.
* ಉದ್ದೇಶಿತ ಮೆಟ್ರೋ ನಿಲ್ದಾಣಗಳಿಗೆ ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಪ್ರಯಾಣಿಕರಿಗೆ ಎಲೆಕ್ಟ್ರಿಕ್ ಬಸ್ ಸೇವೆ ಲಭ್ಯವಾಗುವಂತೆ ಮಾಡಲಾಗುವುದು.
* ಮೆಟ್ರೋ ರೈಲ್ವೆ ಜಾಲ ಬಲಪಡಿಸಲಾಗುವುದು.
* ನಗರದ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ಧಿ ಮತ್ತು ಸುಗಮ ಸಂಚಾರ ವ್ಯವಸ್ಥೆಗೆ ಕ್ರಮ
* ನಗರದಲ್ಲಿನ ವಾಹನ ದಟ್ಟಣೆಗೆ ಕಡಿಮೆಗೊಳಿಸಲು ವಿನೂತನ ಕ್ರಮ ಕೈಗೊಳ್ಳಲಾಗುವುದು.
* ದಶಕಗಳಿಂದ ನೆನೆಗುದಿಗೆ ಬಿದ್ದ ಬೆಂಗಳೂರು ಹೊರ ವರ್ತುಲ ರಸ್ತೆ (PRR) ಕಾಮಗಾರಿ ತ್ವರಿತ ಪೂರ್ಣಕ್ಕೆ ಆದ್ಯತೆ.
* 163 ಜಂಕ್ಷನ್‌ಗಳಲ್ಲಿ ಆಟೋ ಮ್ಯಾಟಿಕ್ ಸಿಗ್ನಲ್ ಸ್ಥಾಪನೆ ಮತ್ತು ಅಪಘಾತದ ಬ್ಲಾಕ್ ಸ್ಟಾಟ್‌ಗಳ ಅಭಿವೃದ್ಧಿ.
* ರಸ್ತೆಗುಂಡಿಗಳ ಮುಚ್ಚುವ ದುರಸ್ಥಿ ಕಾರ್ಯವನ್ನು ಒಂದರಿಂದ ಎರಡು ದಿನದಲ್ಲಿ ಮುಗಿಸಲು ವ್ಯವಸ್ಥೆ.
* ಸಾರ್ವಜನಿಕರಿಗಾಗಿ ಸ್ನೇಹಮಯಿ ಪಾದಾಚಾರಿ ರಸ್ತೆಗಳ ನಿರ್ಮಾಣ.
ಬೆಂಗಳೂರು ಹಸರೀಕರಣ-ಅರಣ್ಯೀಕರಣ
* ನಗರದಲ್ಲಿ ಗಿಡ ನೆಡುವ ಕಾರ್ಯಕ್ರಮ ಆರಂಭಿಸಲಾಗುವುದು
* 110 ಹಳ್ಳಿಗಳಲ್ಲಿ 300 ಸಾರ್ವಜನಿಕ ಉದ್ಯಾನ ಸ್ಥಾಪನೆ
* ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಕ್ರಮ
* ಸೋಲಾರ್ ಬೀದಿ ದೀಪ ಬಳಕೆಗೆ ಉತ್ತೇಜನ.
* ಕುಟುಂಬಗಳಿಗೆ (ಮನೆ), ಸರ್ಕಾರಿ ಕಚೇರಿಗಳಲ್ಲಿ ಸೋಲಾರ್ ದೀಪ ಬಳಸುವಂತೆ ಉತ್ತೇಜನ