ಮತದಾನಕ್ಕೆ ಹೋಗುತ್ತಿದ್ದಾಗ ಆನೆ ದಾಳಿ, ವ್ಯಕ್ತಿ ಸಾವು! | JANATA NEWS

ಚಾಮರಾಜನಗರ : ಚಾಮರಾಜನಗರದಲ್ಲಿ ಮತದಾನಕ್ಕೆ ಹೋಗುತ್ತಿದ್ದಾಗ ಅವರ ಮೇಲೆ ಆನೆ ದಾಳಿ ಮಾಡಿದೆ. ಆನೆ ದಾಳಿಗೆ ಸಿಲುಕಿ ಮತದಾರ ಸಾವನ್ನಪ್ಪಿದ ಮಹದೇಶ್ವರ ಬೆಟ್ಟದ ಏರನಕಲ್ಲು ಎಂಬಲ್ಲಿ ನಡೆದಿದೆ.
ಮಹದೇಶ್ವರ ಬೆಟ್ಟದ ತೋಕೆರೆ ಗ್ರಾಮದ ಪುಟ್ಟಸ್ವಾಮಿ (35) ಮೃತ ದುರ್ದೈವಿಯಾಗಿದ್ದಾರೆ. ಮಹದೇಶ್ವರ ಬೆಟ್ಟದ ಏರನಕಲ್ಲು ಎಂಬಲ್ಲಿ ಘಟನೆ ನಡೆದಿದ್ದು, ಹಳೇ ಮಾರ್ಟಳ್ಳಿಯಿಂದ ತೋಕೆರೆಗೆ ಕಾಲು ದಾರಿಯಲ್ಲಿ ಬರುತ್ತಿದ್ದ ಪುಟ್ಟಸ್ವಾಮಿ ಅವರ ಮೇಲೆ ಆನೆ ದಾಳಿ ಮಾಡಿದೆ. ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟಿದ್ದಾರೆ.
RELATED TOPICS:
English summary :While going to vote, elephant attacked, man died