ಹಾಡಹಗಲಲ್ಲೇ ಸರ್ಕಾರಿ ಸಾರಿಗೆ ಬಸ್ ಚಾಲಕನ ಬರ್ಬರ ಕೊಲೆ | JANATA NEWS

ಕಲಬುರಗಿ : ಹಾಡಹಗಲಲ್ಲೇ ಸರ್ಕಾರಿ ಸಾರಿಗೆ ಬಸ್ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ಕಲಬುರಗಿ ನಗರದ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.
ನಾಗಯ್ಯಸ್ವಾಮಿ (45) ಕೊಲೆಯಾದ ಕೆಕೆಆರ್ಟಿಸಿ ಬಸ್ ಚಾಲಕ. ನಾಗಯ್ಯ ಸ್ವಾಮಿ ಅಫಜಲಪುರ ತಾಲ್ಲೂಕಿನ ಮದರಿ ಗ್ರಾಮದ ನಿವಾಸಿವಾಗಿದ್ದು, ಸಾರಿಗೆ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿ ಮಾಡಿದಾಗ ಮೊದಲು ನಾಗಯ್ಯ ಸ್ವಾಮಿ ಕೈ ಹೆಬ್ಬೆರಳು ತುಂಡಾಗಿದೆ.
ತಕ್ಷಣ ನಾಗಯ್ಯ ಅಲ್ಲಿಂದ ಓಡಿ ಹೋಗುತ್ತಿದ್ದಂತೆ ಬೆನ್ನಟ್ಟಿ ಹೋಗಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಳೆ ವೈಷಮ್ಯ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಬ್ರಹ್ಮಪುರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದು, ಬ್ರಹ್ಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.