ನಾನು ಇಡೀ ಸಮೀಕ್ಷೆನೇ ಸುಳ್ಳು ಎಂದು ಹೇಳಲ್ಲ, ಆದರೆ ನಿಜವಾದ ಫಲಿತಾಂಶ ಗೊತ್ತಾಗುವುದು 13ನೇ ತಾರೀಕು | JANATA NEWS

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 13ರ ಶನಿವಾರ ಪ್ರಕಟವಾಗಲಿದ್ದು, ಇದರ ನಡುವೆಯೇ ಹಲವು ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರ ಶುರು ಮಾಡಿದ್ದಾರೆ.
ಕೆಲವೇ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಗೆದ್ದಿದೆ. ಅದೇ ನಿಜವಾಗೋದು. ಈ ಬಾರಿ ಬಿಜೆಪಿಗೇ ಬಹುಮತ, ಬಿಜೆಪಿಯದ್ದೇ ಸರ್ಕಾರ ಬರುತ್ತದೆ.
ಗುಜರಾತ್ ಅಲ್ಲೂ ಕೂಡ ಬಿಜೆಪಿಗೆ ಸರಳ ಬಹುಮತ ಎಂದು ಸಮೀಕ್ಷೆ ಕೊಟ್ಟಿದ್ದರು. ಆದರೆ ಅಲ್ಲಿ ಬಹುಮತವೇ ಬಂತು. ನಾನು ಇಡೀ ಸಮೀಕ್ಷೆನೇ ಸುಳ್ಳು ಎಂದು ಹೇಳಲ್ಲ. ಆದರೆ ನಿಜವಾದ ಫಲಿತಾಂಶ ಗೊತ್ತಾಗುವುದು 13ನೇ ತಾರೀಕು. ನಮಗೆ ಬಂದಿರುವ ವರದಿ ಪ್ರಕಾರ ನಮಗೆ ಬಹುಮತ ಸಿಕ್ಕೇ ಸಿಗುತ್ತದೆ. ಮ್ಯಾಜಿಕ್ ನಂಬರ್ 112ನ್ನು ನಾವು ದಾಟುತ್ತೇವೆ ಎಂದರು.
ನಾವು ಮ್ಯಾಚ್ ಆಡೋದಕ್ಕೆ ಬಂದಿದ್ದೇವೆ, ಆಡಿ ಗೆಲ್ತೀವಿ. ಕಳೆದ ಬಾರಿ ಮೈತ್ರಿ ಸರ್ಕಾರ ಬಂತು. ನಂತರ ಅದು ಬಿದ್ದು ಹೋಯ್ತು. ಕಳೆದ 4 ವರ್ಷದಿಂದ ಸ್ಥಿರ ಸರ್ಕಾರ ಕೊಟ್ಟಿದ್ದು ಬಿಜೆಪಿ. ನಾವು ಯಾರ ಜತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಿಸಲ್ಟ್ ಬರಲಿ, ರಿಸಲ್ಟ್ ಬಂದ ಮೇಲೆ ಹೈಕಮಾಂಡ್ ನಾಯಕರ ಸೂಚನೆಯಂತೆ ನಡೆದುಕೊಳ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ವಯಸ್ಸಾಗಿರುವ ಪಕ್ಷ, ಇಡೀ ದೇಶದಲ್ಲಿ ಸತ್ತು ಹೋಗಿದೆ. ಕರ್ನಾಟಕದಲ್ಲೂ ಸ್ವಲ್ಪ ಉಸಿರಾಡಿದರೆ, ಆ ಉಸಿರು ಇನ್ನೂ ಎಷ್ಟಿದೆ ಎಂದು ಫಲಿತಾಂಶದಿಂದ ಗೊತ್ತಾಗುತ್ತದೆ. ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಿಸುವ ಜಾಯ ಮಾನ ನಮ್ಮದಲ್ಲ. ಮೊದಲು ಕೂಸು ಹುಟ್ಟಲಿ, ಆಮೇಲೆ ನಾವು ಕುಲಾವಿ ಹೊಲಿಸ್ರೀವಿ. ಆದರೆ ಕಾಂಗ್ರೆಸ್ ನಾಯಕರು ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಿಸೋಕೆ ಹೊರಟಿದ್ದಾರೆ. ದೊಂಬರಾಟ ಬಿಡಿ, ಚುನಾವಣೆ ಫಲಿತಾಂಶದ ವರೆಗೂ ಕಾಯಿರಿ ಎಂದು ವಾಗ್ದಾಳಿ ನಡೆಸಿದರು.