Wed,Jun19,2024
ಕನ್ನಡ / English

ಪತ್ನಿ ಶೋಕಿಗೆ ಮನನೊಂದು ಇಬ್ಬರು ಮಕ್ಕಳನ್ನು ಕೊಂದು, ಪ್ರಾಣಬಿಟ್ಟ ತಂದೆ! | JANATA NEWS

12 May 2023
1078

ಬೆಂಗಳೂರು : ಪತ್ನಿ ಶೋಕಿಗೆ ಮನನೊಂದು ಇಬ್ಬರು ಮಕ್ಕಳನ್ನು ಕೊಂದು ತಂದೆ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್​​ನಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ಹರೀಶ್ ( 35) ಪ್ರಜ್ವಲ್(6) ರಿಷಬ್(4) ಎಂದು ತಿಳಿದುಬಂದಿದೆ.

ಮೇ 10ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಡಿಗೆ ಮನೆಯಲ್ಲಿ ಮಕ್ಕಳಿಗೆ ನೇಣು ಹಾಕಿ ಕೊಲೆಗೈದು ಬಳಿಕ ಅದೇ ಹಗ್ಗದಿಂದ ತಂದೆ ಹರೀಶ್ ಕೂಡ ನೇಣು ಬಿಗಿದುಕೊಂದು ಸಾವನ್ನಪ್ಪಿದ್ದಾನೆ.

ಆತ್ಮಹತ್ಯೆಗೂ ಮುನ್ನ ಹರೀಶ್​ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದು ಕಾಲವಾದ ನಂತರ ಬರಬೇಕಾಗಿರುವ ಹಣ ಹಾಗೂ ಎಲ್​ಐಸಿ ಬಾಂಡ್​ಅನ್ನು ಪತ್ನಿಗೆ ನೀಡುವಂತೆ ಹೇಳಿದ್ದಾರೆ. ಹರೀಶ್​ ಕರೆ ಮಾಡಿರುವ ಲೊಕೇಷನ್​ ಬಗ್ಗೆ ಸ್ನೇಹಿತ ಹುಡುಕಾಟ ನಡೆಸಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೋಕೇಷನ್​ ಪತ್ತೆಯಾಗಿದೆ.

ಮೃತ ಹರೀಶ್​ 2007ರಲ್ಲಿ ಅಕ್ಕನ ಮಗಳು ಅನನ್ಯಗಳ ಜೊತೆ ಪ್ರೇಮ ವಿವಾಹವಾಗಿದ್ದರು. ಬಳಿಕ ಗಾರ್ವೇಬಾವಿ ಪಾಳ್ಯದಲ್ಲಿ ಪ್ರತ್ಯೇಕ ಮನೆ ಮಾಡಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಆದರೆ ವಿವಾಹದ ಬಳಿಕ ದಂಪತಿಗಳ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ಪತ್ನಿ ಹೈಪೈ ಜೀವನದಿಂದ ದಂಪತಿಗಳ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಈ ವಿಚಾರವಾಗಿ 2015ರಲ್ಲಿ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನವು ಸಹ ಆಗಿತ್ತು. ಈ ನಡುವೆ ಕೆಲವೇ ದಿನಗಳಲ್ಲಿ ಮನೆ ಬಿಟ್ಟು ಪರ ಪುರುಷನೊಂದಿಗೆ ಪರಾರಿಯಾಗಿದ್ದಳು ಎಂಬ ಆರೋಪ ಕೇಳಿ ಬಂದಿದೆ.

ಪತ್ನಿ ಬಿಟ್ಟು ಹೋದ ಬಳಿಕ ಹರೀಶ್ ಇಬ್ಬರು ಮಕ್ಕಳ ಪೋಷಣೆಯನ್ನು ಮಾಡುತ್ತಿದ್ದರಂತೆ. ಆದರೆ ಮತ್ತೆ ಹರೀಶ್ ಸಂಪರ್ಕ ಮಾಡಿದ್ದ ಪತ್ನಿ ಪದೇ ಪದೇ ಹಣ ಕೊಡುವಂತೆ ಬೇಡಿಕೆ ಇಡುತ್ತಿದ್ದಳಂತೆ, ಇಲ್ಲ ಎಂದರೆ ಮನೆಯ ಬಳಿ ಬಂದು ರಂಪಾಟ ಮಾಡುವುದಾಗಿ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ.

RELATED TOPICS:
English summary :The father killed his two children because of his wife Shoki

ಸಂಸತ್ತಿನಲ್ಲಿ ಎಲ್ಲಾ ಮೂರು ಗಾಂಧಿ ಕುಟುಂಬದ ಸದಸ್ಯರ ಉಪಸ್ಥಿತಿ ಸಾಧ್ಯತೆಗಳೆಷ್ಟು?
ಸಂಸತ್ತಿನಲ್ಲಿ ಎಲ್ಲಾ ಮೂರು ಗಾಂಧಿ ಕುಟುಂಬದ ಸದಸ್ಯರ ಉಪಸ್ಥಿತಿ ಸಾಧ್ಯತೆಗಳೆಷ್ಟು?
ಖಟಾಖತ್ ಯೋಜನೆ : ಕಾಂಗ್ರೆಸ್‌ನ 99, ಎಸ್‌ಪಿ 37 ಸಂಸದರ ಪ್ರಮಾಣ ವಚನ ಸ್ವೀಕಾರ ತಡೆಗೆ ರಾಷ್ಟ್ರಪತಿಗೆ ಪತ್ರ
ಖಟಾಖತ್ ಯೋಜನೆ : ಕಾಂಗ್ರೆಸ್‌ನ 99, ಎಸ್‌ಪಿ 37 ಸಂಸದರ ಪ್ರಮಾಣ ವಚನ ಸ್ವೀಕಾರ ತಡೆಗೆ ರಾಷ್ಟ್ರಪತಿಗೆ ಪತ್ರ
ಎಲೋನ್ ಮಸ್ಕ್ ಹೇಳಿಕೆ ಬೆನ್ನಲ್ಲೇ, ಭಾರತದಲ್ಲಿ ಇವಿಎಂಗಳು ಬ್ಲ್ಯಾಕ್ ಬಾಕ್ಸ್ ಎಂದ ರಾಹುಲ್ ಗಾಂಧಿ :
ಎಲೋನ್ ಮಸ್ಕ್ ಹೇಳಿಕೆ ಬೆನ್ನಲ್ಲೇ, ಭಾರತದಲ್ಲಿ ಇವಿಎಂಗಳು ಬ್ಲ್ಯಾಕ್ ಬಾಕ್ಸ್ ಎಂದ ರಾಹುಲ್ ಗಾಂಧಿ :
ಜಮ್ಮುವಿನಲ್ಲಿ ಶೂನ್ಯ ಭಯೋತ್ಪಾದನಾ ಯೋಜನೆ ಮೂಲಕ ಕಾಶ್ಮೀರದಲ್ಲಿ ಸಾಧಿಸಿದ ಯಶಸ್ಸನ್ನು ಪುನರಾವರ್ತಿಸಲು ಅಮಿತ್ ಷಾ ಸೂಚನೆ
ಜಮ್ಮುವಿನಲ್ಲಿ ಶೂನ್ಯ ಭಯೋತ್ಪಾದನಾ ಯೋಜನೆ ಮೂಲಕ ಕಾಶ್ಮೀರದಲ್ಲಿ ಸಾಧಿಸಿದ ಯಶಸ್ಸನ್ನು ಪುನರಾವರ್ತಿಸಲು ಅಮಿತ್ ಷಾ ಸೂಚನೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿಢೀರ್‌ ಏರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ : ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ ಬಿಜೆಪಿ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿಢೀರ್‌ ಏರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ : ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ ಬಿಜೆಪಿ
ಜಿ-7 ಶೃಂಗಸಭೆ : ಫೋಟೋ ಷೂಟ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರಸ್ಥಾನ
ಜಿ-7 ಶೃಂಗಸಭೆ : ಫೋಟೋ ಷೂಟ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರಸ್ಥಾನ
ಜಿ7 ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ : ಭಾಷಣದ ಮುಖ್ಯಾಂಶಗಳು
ಜಿ7 ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ : ಭಾಷಣದ ಮುಖ್ಯಾಂಶಗಳು
ಅರುಂಧತಿ ರಾಯ್ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾನೂನಿನಡಿ ವಿಚಾರಣೆ
ಅರುಂಧತಿ ರಾಯ್ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾನೂನಿನಡಿ ವಿಚಾರಣೆ
ಕುವೈತ್‌ ಅಗ್ನಿ ದುರಂತ : ಭಾರತಕ್ಕೆ ತರಲಾದ ಮೃತಪಟ್ಟ 45 ಭಾರತೀಯ ಕಾರ್ಮಿಕರ ಮೃತದೇಹ
ಕುವೈತ್‌ ಅಗ್ನಿ ದುರಂತ : ಭಾರತಕ್ಕೆ ತರಲಾದ ಮೃತಪಟ್ಟ 45 ಭಾರತೀಯ ಕಾರ್ಮಿಕರ ಮೃತದೇಹ
ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ : ದಿಢೀರ್‌ ವೇಗ ಪಡೆದ ಪ್ರಕರಣ
ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ : ದಿಢೀರ್‌ ವೇಗ ಪಡೆದ ಪ್ರಕರಣ
 ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ
ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ
ಭಯೋತ್ಪಾದನಾ ನಿಗ್ರಹ ಸಾಮರ್ಥ್ಯದ ಸಶಸ್ತ್ರ ಪಡೆಗಳ ಸಂಪೂರ್ಣ ಶ್ರೇಣಿಯನ್ನು ನಿಯೋಜಿಸಲು ಪ್ರಧಾನಿ ಮೋದಿ ಸೂಚನೆ
ಭಯೋತ್ಪಾದನಾ ನಿಗ್ರಹ ಸಾಮರ್ಥ್ಯದ ಸಶಸ್ತ್ರ ಪಡೆಗಳ ಸಂಪೂರ್ಣ ಶ್ರೇಣಿಯನ್ನು ನಿಯೋಜಿಸಲು ಪ್ರಧಾನಿ ಮೋದಿ ಸೂಚನೆ

ನ್ಯೂಸ್ MORE NEWS...