ಕಾಂಗ್ರೆಸ್ನ 20 ಶಾಸಕರು ಬಿಜೆಪಿಗೆ ಬರ್ತಾರೆ: ಲಖನ್ ಜಾರಕಿಹೊಳಿ ಸ್ಫೋಟಕ ಹೇಳಿಕೆ | JANATA NEWS
ಬೆಳಗಾವಿ : ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಫಲಿತಾಂಶದ ಬಳಿಕ 20 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಅಂಥ ಎಂಎಲ್ಸಿ ಲಖನ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಗೋವಾದಲ್ಲಿ ಆದಂತೆ ಇಲ್ಲಿಯೂ ಸರ್ಕಾರ ರಚಿಸುತ್ತೇವೆ ಎಂದು ಹೇಳಿರುವುದು ರಾಜಕಾರಣದಲ್ಲಿ ಭಾರೀ ಸುದ್ದಿಯಾಗುತ್ತಿದೆ.
ಬಿಜೆಪಿ 120 ಸೀಟುಗಳನ್ನು ಪಡೆಯುತ್ತದೆ. ಕಾಂಗ್ರೆಸ್ಗೆ 80 ಸ್ಥಾನ ಬರುತ್ತದೆ. ಅದರಲ್ಲಿ 20 ಶಾಸಕರೂ ಬಿಜೆಪಿಗೆ ಬರುತ್ತಾರೆ ಎಂದು ಹೇಳಿದ್ದಾರೆ. ಅದಲ್ಲದೇ ಕಳೆದ ಬಾರಿ ಗೋವಾದಲ್ಲಿ ಏನಾಗಿದೆಯೋ ಅದೇ ಕರ್ನಾಟಕದಲ್ಲೂ ಸಂಭವಿಸಲಿದೆ ಎಂದು ಹೇಳಿರುವುದು ಈಗ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
RELATED TOPICS:
English summary :20 MLAs of Congress join BJP: Lakhan Jarakiholi explosive statement