ಸಿದ್ದರಾಮಯ್ಯ ಮನೆಯಲ್ಲಿ ಸೂತಕದ ಛಾಯೆ, ಬಾವ ರಾಮೇಗೌಡ ನಿಧನ! | JANATA NEWS

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಇದರಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದ್ದು, ವರುಣಾ ಕ್ಷೇತ್ರದಲ್ಲಿ ಬಿಜೆಪಿಯ ಸೋಮಣ್ಣ ವಿರುದ್ಧ ಸಿದ್ದರಾಮಯ್ಯ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಿಹಿ ಸುದ್ದಿಯ ನಡುವೆ ಕಹಿ ಸುದ್ದಿಯೊಂದು ಬಂದೆರಗಿದೆ.
ಸಿದ್ದರಾಮಯ್ಯ ಅವರ ಭಾವ ನಿಧನರಾಗಿದ್ದಾರೆ. ಸಿದ್ದರಾಮಯ್ಯ ಅವರ ಸ್ವಂತ ಸಹೋದರಿ ಶಿವಮ್ಮ ಪತಿ ಸಾವನ್ನಪ್ಪಿದ್ದಾರೆ. ರಾಮೇಗೌಡ (69) ವರ್ಷ ಮೃತ ವ್ಯಕ್ತಿ.
ಅನಾರೋಗ್ಯ ಹಿನ್ನೆಲೆಯಲ್ಲಿ ರಾಮೇಗೌಡರನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಇಂದು ಬೆಳಗ್ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರಾಮೇಗೌಡ ಅವರು ಮೃತಪಟ್ಟಿದ್ದಾರೆ.
ಅವರ ನಿಧನದಿಂದ ಸಿದ್ದು ಕುಟುಂದ ದುಃಖ ಸಾಗರದಲ್ಲಿ ಮುಳುಗಿದೆ. ಇಂದು ಮಧ್ಯಾಹ್ನ ರಾಮೇಗೌಡ ಅವರ ಅಂತಿಮ ಕ್ರಿಯೆ ನೇರವೇರಲಿದೆ.