ಭೀಕರ ಸರಣಿ ಅಪಘಾತ, ಮೂವರು ದಾರುಣ ಸಾವು | JANATA NEWS

ಗದಗ : ಭೀಕರ ಸರಣಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ದಾರುಣವಾಗಿ ಸಾವನ್ನಪ್ಪಿರೋ ಘಟನೆ ಗದಗ ತಾಲೂಕಿನ ಅಡವಿಸೋಮಾಪೂರ ಬಳಿ ಸಂಭವಿಸಿದೆ.
ಸಿಂಗಟರಾಯನಕೇರಿ ತಾಂಡಾದ ಶಿವಪ್ಪ ನಾಯಕ್ (50), ಛಬ್ಬಿ ತಾಂಡಾದ ಶಿವಾನಂದ ಲಮಾಣಿ (33), ಹಾಗೂ ಡೋಣಿ ತಾಂಡಾದ ಕೃಷ್ಣಪ್ಪ ಚೌಹಾಣ (31) ಸಾವನ್ನಪ್ಪಿದ್ದಾರೆ.
ಮೃತ ಮೂವರು ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾದ ನಿವಾಸಿಗಳು. ಟಿವಿಎಸ್ ಎಕ್ಸೆಲ್, ಹೀರೋ ಸ್ಪ್ಲೆಂಡರ್ ಹಾಗೂ ಚವರ್ಲೆಟ್ ಕಾರ್ಮ ಮಧ್ಯೆ ಸರಣಿ ಅಪಘಾತ ಅಪಘಾತ ಸಂಭವಿಸಿದೆ. ಗದಗ ಕಡೆಯಿಂದ ಕಾರು ಅತೀ ವೇಗವಾಗಿ ಬಂದು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.