ನಾಳೆ ಪ್ರಮಾಣ ವಚನ ಸಮಾರಂಭ : ಸುಳ್ಳು ಸುದ್ದಿಯನ್ನು ನಂಬಬೇಡಿ - ಕಾಂಗ್ರೆಸ್ ರಾಜ್ಯ ವಸ್ತುವಾರಿ ರಣದೀಪ ಸುರಜೇವಾಲ | JANATA NEWS

ನವದೆಹಲಿ : ಸುಳ್ಳು ಸುದ್ದಿಯನ್ನು ನಂಬಬೇಡಿ, ಸುಳ್ಳು ಸುದ್ದಿಯನ್ನು ಹರಡಬೇಡಿ, ಆದಷ್ಟು ಬೇಗ ಮುಂದಿನ ಸಿಎಂ ಆಯ್ಕೆ ಮಾಡಿ ನಿಮಗೆ ತಿಳಿಸುತ್ತೇವೆ. 48 ರಿಂದ 72 ಗಂಟೆಯೊಳಗೆ ಸಂಪುಟ ರಚನೆಯಾಗುತ್ತದೆ - ಎಂದು ಕರ್ನಾಟಕ ವಸ್ತುವಾರಿ ರಣದೀಪ ಸಿಂಗ್ ಸುರಜೇವಾಲ ಹೇಳಿದ್ದಾರೆ.
ಕಂಠೀರವ ಸ್ಟೇಡಿಯಂನಲ್ಲಿ ನಾಳೆ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಆಗಲಿದ್ದು, ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ಶಿವಕುಮಾರ್‌ಗೆ ಸೋನಿಯಾ ಗಾಂಧಿ ಅವರು 'ನಿಷ್ಠೆಗೆ ಪ್ರತಿಫಲ ಸಿಗುವುದಿಲ್ಲ' ಎಂದು ಹೇಳಿದ್ದರು ಎಂದು ಕೂಡ ಮಾಧ್ಯಮಗಳು ವರದಿ ಮಾಡಿದ್ದವು.
ಕಾಂಗ್ರೆಸ್ ನಾಯಕತ್ವ ಮತ್ತು ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಅವರಿಗೆ ಉಪ ಮುಖ್ಯಮಂತ್ರಿ ಮತ್ತು ಪಿಸಿಸಿ ಸ್ಥಾನದ ಜೊತೆಗೆ ಆರು ಖಾತೆಗಳನ್ನು ನೀಡಿದ್ದು, ಅವರು ಇನ್ನೂ ಒಪ್ಪಿಗೆ ನೀಡಿಲ್ಲ, ಎಂದು ಕೂಡ ಮಾಧ್ಯಮಗಳು ವರದಿ ಮಾಡಿದ್ದವು.