ಎಲ್ಲದಕ್ಕೂ ಬಿಜೆಪಿ ಕಾರಣ ಎಂದು ಆರೋಪಿಸದಿದ್ದರೆ ನಿಮಗೆ ಹೊಟ್ಟೆ ತುಂಬುವುದಿಲ್ಲವೇ? ಕಾಂಗ್ರೆಸ್ ಗೆ ಸುನಿಲ್ ಕುಮಾರ್ ಪ್ರಶ್ನೆ | JANATA NEWS

ಬೆಂಗಳೂರು : ಎಲ್ಲದಕ್ಕೂ ಬಿಜೆಪಿ ಕಾರಣ ಎಂದು ಆರೋಪಿಸದಿದ್ದರೆ ನಿಮಗೆ ಹೊಟ್ಟೆ ತುಂಬುವುದಿಲ್ಲವೇ? ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೆವಾಲ ಅವರಿಗೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಸುನಿಲ್ ಕುಮಾರ್ ಕಾರ್ಕಳ ಅವರು ಪ್ರಶ್ನಿಸಿದ್ದಾರೆ.
ಫಲಿತಾಂಶ ಬಂದು ಐದು ದಿನ ಕಳೆದರೂ ಮುಖ್ಯಮಂತ್ರಿ ಯಾರೆಂದು ತೀರ್ಮಾನಿಸಲಾಗದ ನಿಶ್ಯಕ್ತ ಸ್ಥಿತಿಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹೈಕಮಾಂಡ್ ಕುಳಿತಿದೆ. ಆದರೆ ಮುಖ್ಯ ಮಂತ್ರಿ ವಿಚಾರದಲ್ಲಿ ಸುಳ್ಳು ಸುದ್ದಿಯನ್ನು ಕರ್ನಾಟಕ ಬಿಜೆಪಿ ಹಬ್ಬಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೆವಾಲ ಹೇಳುತ್ತಿದ್ದಾರೆ.
ಸ್ವಾಮಿ ನಿಮ್ಮ ಮನೆಯ ಕಳ್ಳ ಕಿವಿ ಹಾಗೂ ಬಾಯಿಗೆ ಮೊದಲು ಬೀಗ ಹಾಕಿ. ಎಲ್ಲದಕ್ಕೂ ಬಿಜೆಪಿ ಕಾರಣ ಎಂದು ಆರೋಪಿಸದಿದ್ದರೆ ನಿಮಗೆ ಹೊಟ್ಟೆ ತುಂಬುವುದಿಲ್ಲವೇ? ಮೊದಲು ನಿಮ್ಮ ಮನೆಯ ಮುಸುರೆ ಸ್ವಚ್ಚ ಮಾಡಿಕೊಳ್ಳಿ. ಆ ಮೇಲೆ ಪಕ್ಕದ ಮನೆಯ ಅಡುಗೆ ಕೋಣೆ ಬಗ್ಗೆ ಮಾತನಾಡಿ, ಎಂದು ಕಿವಿಮಾತು ಹೇಳಿ ಮಾಜಿ ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರು ಟ್ವೀಟ್ ಮಾಡಿದ್ದಾರೆ.