ಪ್ರೇಯಸಿ ಗಂಡನಿಗೆ ಚಾಕು ಇರಿದು ಬರ್ಬರವಾಗಿ ಕೊಂದ ಪ್ರಿಯಕರ! | JANATA NEWS

ಬೆಂಗಳೂರು : ಪ್ರಿಯಾ ಹಾಗು ಉದಯ್ ಎಂಬುವವರು ಬೆಂಗಳೂರಿನಲ್ಲಿ ಮಹದೇಪುರದಲ್ಲಿ ಸಂಸಾರ ನಡೆಸುತ್ತಿದ್ದರು. ಆದರೆ, ಉದಯ್ ಆಗಾಗ ಕುಡಿದು ಗಲಾಟೆ ಮಾಡುತ್ತಿದ್ದನಂತೆ.
ಮೃತ ವ್ಯಕ್ತಿಯನ್ನು ಉದಯ್ ಕುಮಾರ್ ಎಂದು ಗುರುತಿಸಲಾಗಿದೆ. ಉದಯ್ ಮೂಲತಃ ಮೆಕಾನಿಕ್. ಇದನ್ನರಿತ ಪಕ್ಕದ ಮನೆಯ ವ್ಯಕ್ತಿ ಅನ್ವರ್ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹಿಂದೆ ಬಿದ್ದಿದ್ದಾನೆ. ಪ್ರೀತಿಯ ಬಲೆಗೆ ಬಿದ್ದ ಪ್ರಿಯಾ ನನ್ನ ಗಂಡ ಕುಡಿದು ಗಲಾಟೆ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪ್ರಿಯತಮ ಅನ್ವರ್, ಪ್ರಿಯಾ ಬಳಿ ಆಕೆ ಗಂಡನ ನಂಬರ್ ತೆಗೆದುಕೊಂಡಿದ್ದಾನೆ.
ಆದರೆ, ದುಡಿಮೆಗಾಗಿ ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಉದಯ್‌ನನ್ನು ರಾತ್ರಿ ವೇಳೆ ಬೈಕ್ ರಿಪೇರಿ ಮಾರ್ಗ ಮಧ್ಯದಲ್ಲಿ ಬೈಕ್ ಕೆಟ್ಟುನಿಂತಿದ್ದು, ರಿಪೇರಿಗಾಗಿ ಈಗಲೇ ಸ್ಥಳಕ್ಕೆ ಬರುವಂತೆ ಫೋನ್ ಮಾಡಿ ಮಹದೇವಪುರದ ಶಿವ ದೇವಾಲಯದ ಬಳಿ ಕರೆಸಿಕೊಂಡಿದ್ದಾನೆ.
ಬೈಕ್ ರಿಪೇರಿಗೆ ಬರುವುದಾಗಿ ಹೇಳಿ ಕೆಲವು ಟೂಲ್ಸ್‌ಗಳನ್ನು ತೆಗೆದುಕೊಂಡು ಉದಯ್‌ಕುಮಾರ್ ಶಿವ ದೇವಾಲಯದ ಬಳಿ ಹೋಗಿದ್ದಾನೆ. ಈ ವೇಳೆ ಬೈಕ್ ರಿಪೇರಿ ಏನಾಗಿದೆ ಎಂದು ಪರಿಶೀಲನೆ ಮಾಡುವಾಗ, ಅನ್ವರ್ ಮಾತನಾಡುತ್ತಾ ನಿನ್ನ ಪತ್ನಿಗೆ ಯಾಕೆ ಕುಡಿದು ಬಂದು ಹಿಂಸೆ ಕೊಡ್ತೀಯಾ ಎಂದು ಪ್ರಶ್ನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಉದಯ್ ನನ್ನ ಪತ್ನಿಯ ಬಗ್ಗೆ ಇಷ್ಟೊಂದು ಸಲುಗೆ ಇಟ್ಟುಕೊಂಡು ಕೇಳಲು ನೀನ್ಯಾರು ರಂದು ಉದಯ್ ರೇಗಾಡಿದ್ದಾನೆ. ಇದು ವಿಕೋಪಕ್ಕೆ ತಿರುಗಿ ಅನ್ವರ್ ಏಕಾಏಕಿ ಚಾಕುವಿನಿಂದ ಉದಯ್ ಎದೆ ಭಾಗಕ್ಕೆ ಇರಿದಿದ್ದಾನೆ. ಈ ಕೂಡಲೇ ಉದಯ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.
ಈ ಘಟನೆ ಕುರಿತಂತೆ ಮಹದೇವಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.