ಎಚ್ಚರ! ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರೆ ಸಸ್ಪೆನ್ಡ್ ಭಾಗ್ಯ - ಸಂಸದ ಪ್ರತಾಪ್ ಸಿಂಹ | JANATA NEWS

ಬೆಂಗಳೂರು : ಎಚ್ಚರ! ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರೆ "ಸಸ್ಪೆನ್ಡ್ ಭಾಗ್ಯ"!! ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ಉಚಿತ ಕೊಡುಗೆಗಳನ್ನು ಟೀಕಿಸಿದ ಫೇಸ್‌ಬುಕ್ ಪೋಸ್ಟ್‌ಗಾಗಿ ಸರ್ಕಾರಿ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ, ಎಂದು ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಸುದ್ದಿಯೊಂದನ್ನು ತಗತ್ತಿಸಿ ಅವರು ಟ್ವೀಟ್ ಮಾಡಿದ್ದಾರೆ. ವರದಿಯಲ್ಲಿ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರು ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಣಕಾಸಿನ ನೀತಿಗಳನ್ನು ಟೀಕಿಸುವ ಫೇಸ್‌ಬುಕ್ ಪೋಸ್ಟ್‌ಗಳಿಗಾಗಿ ಅಮಾನತುಗೊಂಡಿದ್ದಾರೆ, ಎಂದು ಹೇಳಲಾಗಿದೆ.
ಶಿಕ್ಷಕ ಶಾಂತಮೂರ್ತಿ ಎಂಜಿ ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, “ಮಾಜಿ ಮುಖ್ಯಮಂತ್ರಿಗಳಾದ ಎಸ್‌ಎಂ ಕೃಷ್ಣ ಅವರ ಅವಧಿಯಲ್ಲಿ 3,590 ಕೋಟಿ ರೂ. ಸಾಲ ಮಾಡಿದರೆ, ಧರಂ ಸಿಂಗ್ 15,635 ಕೋಟಿ ರೂ., ಎಚ್‌ಡಿ ಕುಮಾರಸ್ವಾಮಿ 3,545 ಕೋಟಿ ರೂ., ಬಿಎಸ್ ಯಡಿಯೂರಪ್ಪ 25,653 ಕೋಟಿ ರೂ., ಡಿವಿ ಸದಾನಂದಗೌಡ 9,464 ಕೋಟಿ ರೂ. ಶೆಟ್ಟರ್ ರೂ 13,464 ಕೋಟಿ ಮತ್ತು ಸಿದ್ದರಾಮಯ್ಯ ರೂ 2,42,000 ಕೋಟಿ ಸಾಲ”.
ಕೃಷ್ಣ ಅವರ ಕಾಲದಿಂದ ಶೆಟ್ಟರ್‌ವರೆಗೆ ಮುಖ್ಯಮಂತ್ರಿಗಳು ಮಾಡಿದ ಸಾಲ 71,331 ಕೋಟಿ ರೂಪಾಯಿಗಳಷ್ಟಿತ್ತು ಆದರೆ ಸಿದ್ದರಾಮಯ್ಯನವರ ಆಳ್ವಿಕೆಯಲ್ಲಿ ಅದು 2,42,000 ಕೋಟಿ ರೂಪಾಯಿಗಳಿಗೆ ತಲುಪಿದೆ. "ಆದ್ದರಿಂದ ಅವರಿಗೆ ಉಚಿತ(ಭಾಗ್ಯ)ಗಳನ್ನು ಘೋಷಿಸುವುದು ಸುಲಭ" ಎಂದು ಶಿಕ್ಷಕರು ಪೋಸ್ಟ್ ನಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.