ನಿಂತಿದ್ದ ಬಸ್ ಗೆ ಟಿಟಿ ಢಿಕ್ಕಿ, ಇಬ್ಬರು ಸಾವು, ನಾಲ್ವರ ಸ್ಥಿತಿ ಗಂಭೀರ | JANATA NEWS

ತುಮಕೂರು : ನಿಂತಿದ್ದ ಬಸ್ ಗೆ ಟೆಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ರಾಜ್ಯ ಹೆದ್ದಾರಿ 33 ಹುಲಿಯೂರುದುರ್ಗ ಹೋಬಳಿ ಡಿ.ಹೊಸಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ರಾಯಚೂರು ಜಿಲ್ಲೆ ಸಿಂಧನೂರು ವಾಸಿ ಟಿಟಿ ವಾಹನದ ಚಾಲಕ ವೀರೇಶ್ (30), ಹಾಗೂ ಶಶಿಕಲಾ( 69) ಮೃತ ದುರ್ದೈವಿಗಳು, ದಿಲೀಪ್ ಕುಮಾರ್, ಆನಂದ್ ಕುಮಾರ್, ಪ್ರಿಯಾ, ಪ್ರತಿಕ್ಷಾ ಗಾಯಗೊಂಡಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಶಿಕಲಾ ಹಾಗೂ ಅವರ ಕುಟುಂಬದ 11 ಮಂದಿ ಸಿಂಧನೂರಿನಿಂದ ಮೈಸೂರು ಜಿಲ್ಲೆ ಪ್ರವಾಸಕ್ಕೆಂದು ಹೊರಟಿದ್ದರು, ಕುಣಿಗಲ್ ಮಾರ್ಗವಾಗಿ ಮೈಸೂರಿಗೆ ಹೋಗುವ ಸಂದರ್ಭಡಿ.ಹೊಸಹಳ್ಳಿ ಗ್ರಾಮದ ಬಳಿ ನಿಂತಿದ್ದ ಖಾಸಗಿ ಬಸ್ ಗೆ ಟಿಟಿ ಢಿಕ್ಕಿ ಹೊಡೆದಿದೆ.
English summary :TT rammed into a standing bus, two dead, four in critical condition