ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ! | JANATA NEWS

ಬೆಂಗಳೂರು : ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದ್ದು, ಮೃತನನ್ನು ರವಿ ಅಲಿಯಾಸ್ ಮತ್ತಿರವಿ (42) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತ ರವಿ ಅಲಿಯಾಸ್ ಮತ್ತಿರವಿ(42) ಎಂಬುವವರನ್ನು ಬೈಕ್ಗಳಲ್ಲಿ ಬಂದ ಐದಾರು ದುಷ್ಕರ್ಮಿಗಳು ಹತ್ಯೆ ಮಾಡಿ ಎಸ್ಕೇಪ್ ಅಗಿದ್ದಾರೆ. ಸಿಎಂಹೆಚ್ ಬಾರ್ ಬಳಿಯಿಂದ ರವಿಯನ್ನ ಅಟ್ಟಾಡಿಸಿದ ಕಿರಾತಕರು ಹಲ್ಲೆ ನಡೆಸಿದ್ದಾರೆ.
ನಂತರ ಅವರು ಹಳ್ಳಿರುಚಿ ಹೊಟೇಲ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿದ್ದು ಕೊನೆಗೆ ತಲೆಯ ಮೇಲೆ ಸೈಜ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.
ಬೈಕ್ ಗಳಲ್ಲಿ ಬಂದ ಐದಾರು ಮಂದಿಯಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು ಇವರು ಹತ್ಯೆಗೂ ಮುನ್ನ ಏರಿಯಾದಲ್ಲಿ ಹಾಕಿದ್ದ ಪ್ಲೆಕ್ಸ್ ನಲ್ಲಿ ರವಿಕುಮಾರ್ ಪೋಟೋ ಹರಿದು ಹಾಕಿದ್ದರು.
ವೃತ್ತಿಯಲ್ಲಿ ಟೆಂಪೋ ಟ್ರಾವೆಲ್ಲರ್ ಚಾಲಕನಾಗಿದ್ದ ರವಿ ಇಂದು ಸಂಜೆ ಕೆಲಸ ಮುಗಿಸಿ ಮನೆ ಹತ್ತಿರ ಬಂದಿದ್ದರು. ಮನೆಯಿಂದ ಹೊರ ಬರುತ್ತಿದ್ದಂತೆಯೆ ಹಂತಕರು ದಾಳಿ ಮಾಡಿದ್ದಾರೆ. ತಪ್ಪಿಸಿಕೊಳ್ಳೋ ಭರದಲ್ಲಿ ಓಡಿದ ರವಿಯನ್ನು ಈ ಕಿರಾಕರು ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.