ಯಾರ್ಯಾರು 40% ಕಮಿಷನ್ ತಗೊಂಡ್ಡಿದ್ದಾರೋ, ಬೀಟ್ ಕಾಯಿನ್ ಭಾಗಿಯಾಗಿದ್ದವರನ್ನು ಜೈಲಿಗೆ ಹಾಕಿ - ಸಂಸದ ಸಿಂಹ ಸವಾಲ್ | JANATA NEWS

ಮೈಸೂರು : ಯಾರ್ಯಾರು 40% ಕಮಿಷನ್ ತಗೊಂಡ್ಡಿದ್ದಾರೋ, ಬೀಟ್ ಕಾಯಿನ್ ಒಳಗೆ ಯಾರ್ಯಾರು ಭಾಗಿಯಾಗಿದ್ದಾರೋ ಅಂತಹವರನ್ನು ಹಿಡಿದು ಜೈಲಿಗೆ ಹಾಕಿ ಸರ್, ಇಲ್ಲಾ ಅಂತ ಆದರೆ, ನೀವು ರಾಜಕೀಯ ಮಾಡೋಗೋಸ್ಕರ, ಜನರನ್ನು ಮಂಗ ಮಾಡೋಗೋಸ್ಕರ ಆರೋಪ ಮಾಡಿದ್ದೀರಿ ಎಂದು ಒಪ್ಪಿಕೊಂಡು ಕ್ಷಮೆ ಕೇಳಿ, ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೊಸ ಕಾಂಗ್ರೆಸ್ ಸರ್ಕಾರಕ್ಕೆ ಸವಾಲೆಸೇದಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಯೋಜನೆ, ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಬಾರದು ಎಂದು ಯಾಕಾಗಿ 3 ದಿನಗಳ ಹಿಂದೆ ಸರ್ಕಾರಿ ಆದೇಶ ಹೊರಡಿಸಿದ್ದೀರಿ ಸಿದ್ದರಾಮಯ್ಯ ಸರ್? ಬಿಜೆಪಿಯವರನ್ನು 40 ಪರ್ಸೆಂಟ್ ಅನ್ನುತ್ತಿದ್ದೀರಲ್ಲಾ, ನೀವೆಷ್ಟು ಪರ್ಸೆಂಟ್ ಕೇಳಲು ಇಂಥದ್ದೊಂದು ಆದೇಶ ಮಾಡಿದ್ದೀರಿ? ನಿಮ್ಮ ಉದ್ದೇಶವೇನು? ದಯವಿಟ್ಟು ಹೇಳಿ, ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್, ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿ ಊರುರು ತಮಟೆ ಹೊಡೆದಿದ್ದೀರಿ. ಈಗ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದಿದೆ, ಈಗ ನೀವೇ ಅಧಿಕಾರಕ್ಕೆ ಬಂದಿದ್ದಿರಾ ತನಿಖೆ ಮಾಡಿ. ಆ 40% ಕಮಿಷನ್ ತಗೊಂಡವರು ಯಾರು? ಆ ಬೀಟ್ ಕಾಯಿನ್ ಒಳಗೆ ಯಾರ್ಯಾರು ಭಾಗಿಯಾಗಿದ್ದರು? ದಯವಿಟ್ಟು ಇದರ ಬಗ್ಗೆ ತಕ್ಷಣ ಒಂದು ತನಿಖೆ ನಡೆಸಿ.
ಯಾರ್ಯಾರು 40% ಕಮಿಷನ್ ತಗೊಂಡ್ಡಿದ್ದಾರೋ, ಬೀಟ್ ಕಾಯಿನ್ ಒಳಗೆ ಯಾರ್ಯಾರು ಭಾಗಿಯಾಗಿದ್ದಾರೋ ಅಂತಹವರನ್ನು ಹಿಡಿದು ಜೈಲಿಗೆ ಹಾಕಿ ಸರ್, ನಾನೇ ಬಂದು ಕಾಲಿಗೆ ಬಂದು ನಮಸ್ಕಾರ ಮಾಡುತ್ತೇನೆ, ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ರಾಜಕೀಯ ಅನ್ನೋದು ಶುದ್ಧೀಕರಣ ಆಗಲಿ. ಯಾರ್ಯಾರು 40% ಕಮಿಷನ್ ತಗೊಂಡ್ಡಿದ್ದಾರೋ ಅಂತಹವರು ಇರಬಾರದು. ಬೀಟ್ ಕಾಯಿನ್ ಒಳಗೆ ಯಾರ್ಯಾರು ಭಾಗಿಯಾಗಿದ್ದಾರೋ ಅಂತಹವರು ಇರಬಾರದು. ನೀವೇನು ಡಂಗುರ ಸಾರಿದ್ದರೋ, ಊರುರು ತಮಟೆ ಬಾರಿಸಿದ್ದರೋ, ಈಗ ತಕ್ಷಣ ತನಿಖೆ ನಡೆಸಿ ಅಂತಹವರನ್ನು ಜೈಲಿಗೆ ಹಾಕಬೇಕು. ಇಲ್ಲಾ ಅಂತ ಆದರೆ, ನೀವು ರಾಜಕೀಯ ಮಾಡೋಗೋಸ್ಕರ, ಜನರನ್ನು ಮಂಗ ಮಾಡೋಗೋಸ್ಕರ ಆರೋಪ ಮಾಡಿದ್ದೀರಿ ಎಂದು ಒಪ್ಪಿಕೊಂಡು ಕ್ಷಮೆ ಕೇಳಿ, ಎಂದು ಸಂಸದ ಸಿಂಹ ಸವಾಲೆಸೇದಿದ್ದಾರೆ.
40% ಕಮೀಷನ್ ಸರ್ಕಾರ ಅಂತಾ ಊರೂರು ತಿರುಗಿ ಪ್ರಚಾರ ಮಾಡಿದ್ದೀರಾ. ಈಗ ನೀವೇ ಅಧಿಕಾರಕ್ಕೆ ಬಂದಿದ್ದಿರಾ ತನಿಖೆ ಮಾಡಿ, ಕಮಿಷನ್ ಪಡೆವರನ್ನು ಜೈಲಿಗೆ ಕಳುಹಿಸುವ ಜವಾಬ್ದಾರಿ ನಿಮ್ಮದು. ಈ ಜವಾಬ್ದಾರಿ ನಿಭಾಯಿಸದೇ ಇದ್ದರೆ ನೀವು ಹೇಳಿದ್ದು ಸುಳ್ಳು ಅಂತಾ ಒಪ್ಪಿಕೊಳ್ಳಿ, ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ಗ್ಯಾರಂಟಿ ಕಾರ್ಡ್ ನಲ್ಲಿ ಕಂಡೀಷನ್ ಅಪ್ಲೈ ಅಂತಾ ಎಲ್ಲೂ ಹಾಕಿಲ್ಲ. ಎಲ್ಲಾ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು, ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಬೇಕು. ಜೂನ್ 1 ರವರೆಗೆ ಕಾಯುತ್ತೇನೆ, ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಬಿಲ್ ಕಟ್ಟಬೇಡಿ ಎಂದು ಹೇಳಿದರು.