ಅಕ್ರಮ ಆಸ್ತಿ ಗಳಿಕೆ : ಪಂಜಾಬ್ ವಿಜಿಲೆನ್ಸ್ ನಿಂದ ಎರಡನೇ ಬಾರಿ ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಚನ್ನಿ ವಿಚಾರಣೆ | JANATA NEWS

ಮೊಹಾಲಿ : ಕಾಂಗ್ರೆಸ್ ಮುಖಂಡ ಹಾಗೂ ಪಂಜಾಬ್ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರು ತಮ್ಮ ಆದಾಯದ ಮೂಲಕ್ಕೆ ಅಸಮಾನವಾಗಿ ಆಸ್ತಿಯನ್ನು ಗಳಿಸಿದ್ದಾರೆ, ಎಂಬ ಆರೋಪದ ಮೇಲೆ ಮೊಹಾಲಿಯ ಪಂಜಾಬ್ ವಿಜಿಲೆನ್ಸ್ ಕಚೇರಿಯಲ್ಲಿ ಎರಡನೇ ಬಾರಿ ವಿಚಾರಣೆ ಎದುರಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿ ಮೊಹಾಲಿಯಲ್ಲಿರುವ ಪಂಜಾಬ್ ವಿಜಿಲೆನ್ಸ್ ಕಚೇರಿಗೆ ಆಗಮಿಸಿದ್ದರು.
ಎಎಪಿ ಸರ್ಕಾರವು "ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಲು" "ಪೊಲೀಸ್ ಮತ್ತು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ" ಎಂದು ಆರೋಪಿಸಿರುವಾಗಲೇ, ಪಂಜಾಬ್ ವಿಜಿಲೆನ್ಸ್ ಬ್ಯೂರೋ, ಎರಡನೇ ಬಾರಿ ಕಾಂಗ್ರೆಸ್ ನಾಯಕ ಚರಂಜಿತ್ ಸಿಂಗ್ ಚನ್ನಿ ಅವರನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ವಿಚಾರಣೆಗೆ ಕರೆದಿದೆ.