ಬಿಬಿಎಂಪಿ, ಸರ್ಕಾರಿ ಅಧಿಕಾರಿಗಳೊಂದಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಸಭೆ : 85% ಡೀಲ್ ಫಿಕ್ಸಿಂಗ್ ಸಭೆಯೇ..? ಬಿಜೆಪಿ ಪ್ರಶ್ನೆ | JANATA NEWS

ಬೆಂಗಳೂರು : ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ ಸೇರಿದಂತೆ ಸರ್ಕಾರಿ ಅಧಿಕಾರಿಗಳ, ಸಂಪುಟ ಸಚಿವರ ಸಭೆಯನ್ನು, ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ನೇತ್ರತ್ವದ ಸಭೆಯ ಫೋಟೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸಚಿವ ಜಮೀರ್ ಅಹ್ಮದ್ ಖಾನ್ ಈ ಸಭೆಯ ಫೋಟೋಗಳನ್ನು ಶೇರ್ ಮಾಡಿದ್ದು, ಸಭೆಯಲ್ಲಿ ವಿವಿಧ ವಿಷಯ ಮತ್ತು ಬೆಂಗಳೂರಿನ ಅಭಿವೃದ್ಧಿ ಕುರಿತು ಚರ್ಚಿಸಿದ ಬಗ್ಗೆ ಬರೆದಿದ್ದರು.
ಸಚಿವ ಜಮೀರ್ ಅಹಮದ್ ಈ ಟ್ವೀಟ್ ಡಿಲೀಟ್ ಮಾಡುವ ಮುನ್ನವೇ ಈ ಪೋಸ್ಟ್ ಶೇರ್ ಮಾಡಿರುವ ರಾಜ್ಯ ಬಿಜೆಪಿ, ಅಬ್ಬಾ..ಹೈಕಮಾಂಡ್ ಗೆ ಲಾಟರಿ ಎಂದು ಟ್ವೀಟ್ ಮಾಡಿದೆ.
ಬಿಜೆಪಿ ಮುಂದುವರೆದ ತನ್ನ ಟ್ವೀಟ್ ನಲ್ಲಿ, "ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ #ATMSarkara ದ ಗೌಪ್ಯ ಸಭೆಯ ರಹಸ್ಯವೇನು...?
ರಾಜ್ಯ ಸರಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಟ್ಟಿಗೇನು ಕೆಲಸ..?
ಇದು 85% ಡೀಲ್ ಫಿಕ್ಸಿಂಗ್ ಸಭೆಯೇ..? ಉತ್ತರಿಸಿ ಮಾನ್ಯ ಸಿದ್ದರಾಮಯ್ಯ, ಡಿಕೆ. ಶಿವಕುಮಾರ್ ಅವರೇ, ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಬಿಜೆಪಿ ಮತ್ತೊಂದು ಟ್ವೀಟ್‌ನಲ್ಲಿ, ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ “ರಹಸ್ಯ ಸಭೆ” ಕರ್ನಾಟಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಗಾಂಧಿಗಳ ಮತ್ತೊಂದು ಮಾರ್ಗವಾಗಿದೆ.
ಕುಟುಂಬದವರು ತಮ್ಮ ಆಪ್ತ ಸಹಾಯಕ ರಣದೀಪ್ ಸುರ್ಜೆವಾಲಾ ಅವರನ್ನು ಕಳುಹಿಸಿದ್ದಾರೆ, ಅವರು ಬಿಡಿಎ/ಬಿಬಿಎಂಪಿ ಅಥವಾ ಸರ್ಕಾರದಲ್ಲಿ ಯಾವುದೇ ಸ್ಥಾನವನ್ನು ಹೊಂದಿರುವುದಿಲ್ಲ, ಕರ್ನಾಟಕದ ವಿಷಯಗಳ ಬಗ್ಗೆ ನಿರ್ಧರಿಸಲು.
ಬಿಬಿಎಂಪಿ ಮತ್ತು ಬಿಡಿಎ ಆಯುಕ್ತರು/ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಲು ಅವರ ಸಾಮರ್ಥ್ಯ ಅಥವಾ ಅಧಿಕಾರ ಏನು?
2024 ರ ಚುನಾವಣೆಗೆ ಮುಂಚಿತವಾಗಿ ಹಣವನ್ನು ಸಂಗ್ರಹಿಸಲು #ಎಟಿಎಂಸರ್ಕಾರದಿಂದ '85% ಡೀಲ್‌ಗಳನ್ನು' ಆಯೋಜಿಸಲಾಗುತ್ತಿದೆಯೇ?, ಎಂದು ಬಿಜೆಪಿ ಪ್ರಶ್ನೆಗಳ ಸುರಿಮಳೆಗೈದಿದೆ.