ನಡುರಸ್ತೆಯಲ್ಲೇ ಯುವತಿಯನ್ನು ಮಾರಕಾಸ್ತ್ರಗಳಿಂದ ಇರಿದು ಬರ್ಬರ ಹತ್ಯೆ | JANATA NEWS

ವಿಜಯಪುರ : ನಡು ರಸ್ತೆಯಲ್ಲೇ ಯುವತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹೊರವಲಯದಲ್ಲಿ ನಡೆದಿದೆ.
ಮೃತರನ್ನು ಗಂಗೂಭಾಯಿ ಯಂಕಂಚಿ (28) ಎಂದು ಗುರುತಿಸಲಾಗಿದ್ದು, ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೊರವಲಯದಲ್ಲಿ ಸ್ಕೂಟಿಯಲ್ಲಿ ಗಂಗೂಬಾಯಿ ಯಂಕಂಚಿ ಎಂಬ ಯುವತಿ ತೆರಳುತ್ತಿದ್ದಳು.
ಈ ವೇಳೆಯನ್ನು ಹಿಂಬಾಲಿಸಿಕೊಂಡು ಬಂದಂತ ದುಷ್ಕರ್ಮಿಗಳು ಸ್ಕೂಟಿಯಲ್ಲಿ ತೆರಳುತ್ತಿದ್ದಾಗಲೇ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ, ಹತ್ಯೆಗೈದು ಯುವತಿಯ ಸ್ಕೂಟಿಯನ್ನು ತೆಗೆದುಕೊಂಡು ಪಾರಿಯಾಗಿದ್ದಾರೆ.
ದುಷ್ಕರ್ಮಿಗಳು ಯುವತಿ ಗಂಗೂಬಾಯಿ ಯಂಕಂಚಿಗೆ ಚುಚ್ಚಿರುವಂತ ಚಾಕು ಆಕೆಯ ಕುತ್ತಿಗೆಯಲ್ಲೇ ಇರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.