ಮೊಬೈಲ್ನಲ್ಲಿ ಮಾತನಾಡುತ್ತಾಳೆ ಎಂದು ಶಂಕಿಸಿ ಹೆಂಡತಿಯ ಗುಪ್ತಾಂಗಕ್ಕೆ ಇರಿದ ಪಾಪಿ ಗಂಡ! | JANATA NEWS
ಬೆಂಗಳೂರು : ಪತ್ನಿ ಮೊಬೈಲ್ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿರುತ್ತಾಳೆ ಎಂದು ಅನುಮಾನಪಟ್ಟ ಪತಿ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾರ್ ಸ್ಟ್ರೀಟ್ನಲ್ಲಿ ನಡೆದಿದೆ.
ಆರೋಪಿ ದಯಾನಂದ್ ಹಾಗೂ ಪ್ರಿಯಾಂಕಾ ಮದುವೆಯಾಗಿ ನೀಲಸಂದ್ರದ ಬಜಾರ್ ಸ್ಟ್ರೀಟ್ನಲ್ಲಿ ವಾಸವಿದ್ದರು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು. ಸದಾ ಕುಡಿದು ಬರುತ್ತಿದ್ದ ದಯಾನಂದ್ ಪತ್ನಿ ಮೇಲೆ ಅನುಮಾನ ಪಟ್ಟು ಗಲಾಟೆ ಮಾಡುತ್ತಿದ್ದ. ರಾತ್ರಿಯೂ ಸಹ ಕಂಠಪೂರ್ತಿ ಕುಡಿದು ಬಂದಿದ್ದ ದಯಾನಂದ್ ಮಲಗಿದ್ದ ಪತ್ನಿ ಜೊತೆ ಜಗಳ ಆರಂಭಿಸಿದ್ದ.
ರೊಚ್ಚಿಗೆದ್ದು ಖಾಸಗಿ ಅಂಗಕ್ಕೆ ಇರಿದು ದಯಾನಂದ ಎಸ್ಕೇಪ್ ಆಗಿದ್ದ. ಪ್ರಿಯಾಂಕಾಳ ಕಿರುಚಾಟ ಕೇಳಿದ ಸ್ಥಳೀಯರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಗಾಯಾಳು ಪತ್ನಿ ಪ್ರಿಯಾಂಕಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.