ಮಾಜಿ ಸಚಿವ ಆರ್.ಎಲ್.ಜಾಲಪ್ಪ ಪುತ್ರನಿಗೆ ಜೈಲು ಶಿಕ್ಷೆ, 20 ಲಕ್ಷ ರೂ. ದಂಡ! | JANATA NEWS

ಬೆಂಗಳೂರು : ಮಾಜಿ ಕೇಂದ್ರ ಸಚಿವ, ದಿವಂಗತ ಆರ್.ಎಲ್. ಜಾಲಪ್ಪ ಪುತ್ರ ಜೆ.ನರಸಿಂಹಸ್ವಾಮಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಜಾಲಪ್ಪ ಪುತ್ರನಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ 20 ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಮೆಡಿಕಲ್ ಸೀಟ್ ಕೊಡಿಸುವುದಾಗಿ ವಂಚಸಿದ್ದ ಮಾಜಿ ಶಾಸಕ ನರಸಿಂಹಸ್ವಾಮಿಗೆ ನ್ಯಾಯಾದೀಶೆ ಪ್ರೀತ್.ಜೆ ಅವರು ದಂಡದ ಜೊತೆಗೆ ಶಿಕ್ಷೆ ಪ್ರಕಟಿಸಿದ್ದಾರೆ.
ದೇವರಾಜು ಅರಸು ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಕೊಡಿಸುವುದಾಗಿ ವಂಚನೆ ಮಾಡಲಾಗಿತ್ತು. ಪುತ್ರಿಯ ಮೆಡಿಕಲ್ ಸೀಟ್‍ಗಾಗಿ ಪ್ರಕಾಶ್ ಕುಮಾರ್ ಯರಪ್ಪ 45 ಲಕ್ಷ ರೂ. ನೀಡಿದ್ದರು.
ಆದರೆ ಅವರು ಸೀಟು ಕೊಡಿಸಿರಲಿಲ್ಲ. ಮೆಡಿಕಲ್ ಸೀಟಿಗಾಗಿ ನೀಡಿದ್ದಂತ 45 ಲಕ್ಷ ಹಣ ವಾಪಾಸ್ಸು ಕೇಳಿದಾಗ, ಅದಕ್ಕೆ ಪ್ರಕಾಶ್ ಕುಮಾರ್ ಯರಪ್ಪ ಅವರಿಗೆ ಚೆಕ್ ನೀಡಿದ್ದರು. ಈ ಚೆಕ್ ಬೌನ್ಸ್ ಆಗಿತ್ತು.
ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕಾಶ್ ಕುಮಾರ್ ಯರಪ್ಪ ಅವರು ಜೆ.ನರಸಿಂಹಸ್ವಾಮಿ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು.
ಇಂದು ಅರ್ಜಿಯ ವಿಚಾರಣೆ ನಡೆಸಿದಂತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಜೆ.ನರಸಿಂಹಸ್ವಾಮಿಗೆ 6 ತಿಗಂಳ ಸೆರೆವಾಸ ವಿಧಿಸಿ ಆದೇಶಿಸಿದೆ. ಅಲ್ಲದೇ 2 ತಿಂಗಳಲ್ಲಿ 45 ಲಕ್ಷ ಹಣವನ್ನು ಹಿಂದಿರುಗಿಸುವಂತೆ ಸೂಚಿಸಿದೆ. ಜೆ.ನರಸಿಂಹಸ್ವಾಮಿ ಅವರು ಹಣ ಹಿಂದಿರುಗಿಸದವರೆಗೊ ಜಾಮೀನು ನೀಡದಿರುವಂತ ಕೋರ್ಟ್ ಆದೇಶಿಸಿದೆ.