Sun,Jun21,2026
ಕನ್ನಡ / English

ಸೋಲಾಗಿದ್ದು ಕಾರ್ಯಕರ್ತರಿಂದಲ್ಲ, ಬಿಜೆಪಿ ಪಕ್ಷದ ತಪ್ಪು ನಿರ್ಧಾರದಿಂದ: ರೇಣುಕಾಚಾರ್ಯ | JANATA NEWS

27 Jun 2023

ದಾವಣಗೆರೆ : 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲೋದಕ್ಕೆ 8 ಕಾರಣಗಳ ಪಟ್ಟಿ ಕೊಟ್ಟಿದ್ದಾರೆ ಮಾಜಿ ಸಚಿವ ರೇಣುಕಾಚಾರ್ಯ. ನಮ್ಮ ಸರ್ಕಾರದ ತಪ್ಪು ನಿರ್ಧಾರಗಳಿಂದ ನಾವು ಸೋತಿದ್ದಾಗಿ ಹೇಳಿದ್ದಾರೆ.

ಈ ವಿಚಾರವಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿರುವ ಅವರು, ಡಾ. ಸುಧಾಕರ್ ಕೆಲಸಕ್ಕೆ ಬಾರದ ಪ್ರಣಾಳಿಕೆ ಮಾಡಿದ್ರು ಎಂದು ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ಬಿಎಸ್‌ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಿದ್ದೇ ಬಿಜೆಪಿ ಸೋಲಿಗೆ ಕಾರಣ ಅಂತ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಒಂದು ವೇಳೆ, ಅವರೇ ಐದು ವರ್ಷ ಮುಂದುವರಿದಿದ್ದರೆ ಈ ಬಾರಿಯೂ ನಮ್ಮದೇ ಸರ್ಕಾರ ಬರುತ್ತಿತ್ತು ಎಂದು ಅವರು ಹೇಳಿದ್ದಾರೆ.

ನಾನು ಒಳಮೀಸಲಾತಿ ಕೊಡಬೇಡಿ ಎಂದು ಈ ಮೊದಲೇ ಹೇಳಿದ್ದೆ. ಆದರೆ ಚುನಾವಣಾ ಹೊತ್ತಲ್ಲಿ ಜಾರಿ ಮಾಡಿದ್ದು ಭಾರೀ ಪೆಟ್ಟು ಕೊಟ್ಟಿತು. ಕೇಂದ್ರ ಸರ್ಕಾರದ ಅಕ್ಕಿ ಕೊಡೋದು ನಿಲ್ಲಿಸಬೇಡಿ ಅಂತೆಯೂ ಹೇಳಿದ್ದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಬಡ ಜನರ ತಿನ್ನುವ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದರು‌. ಹತ್ತು ಕೆಜಿ ಅಕ್ಕಿ ನೀಡುವುದು ಬಿಟ್ಟು ಕಡಿತ ಮಾಡಿದರು ಅಂತ ರೇಣುಕಾಚಾರ್ಯ ಸ್ವಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಎನ್‌ಪಿಎಸ್ ನೌಕರರ ಮನವಿಯನ್ನು ಸ್ವೀಕಾರ ಮಾಡಿ ಎಂದು ಹೇಳಿದರೂ ಮಾಡಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.

ಡಾ ಸುಧಾಕರ್‌ ಅವರು ಬೊಮ್ಮಾಯಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಅವರನ್ನು ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಕೆಲಸಕ್ಕೆ ಬಾರದ ಪ್ರನಾಳಿಕೆ ಮಾಡಿದ್ದಾರೆ ಎಂದು ಸ್ವಪಕ್ಷದ ವಿರುದ್ದ ಅಕ್ರೋಶಗೊಂಡರು. ರೇಣುಕಾಚಾರ್ಯ ಗೆ ಒಬ್ಬನಿಗೆ ಅಲ್ಲ ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ನೋವಾಗಿದೆ ಅಂತ ಹೇಳಿದ್ರು.

ಈಶ್ವರಪ್ಪ ಹಾಗೂ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ಅನ್ನು ನಿರಾಕರಿಸಿದ್ದು ಬಹುದೊಡ್ಡ ತಪ್ಪು. ಅವರಿಗೇನು ಮಹಾ ವಯಸ್ಸಾಗಿತ್ತು. ಅವರೇನು ತಪ್ಪು ಮಾಡಿದ್ದರು ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

ರಾಜ್ಯದ ಅಧ್ಯಕ್ಷರು ಗೊಂದಲದ ಹೇಳಿಕೆ ನೀಡುತ್ತಾ ಬಂದಿದ್ದಾರೆ.‌ ರಾಜೀನಾಮೆ ನೀಡುತ್ತೇನೆ, ಒಮ್ಮೆ ನೀಡೋದಿಲ್ಲ ಅಂತ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಅಂತ ರೇಣುಕಾಚಾರ್ಯ ಹೇಳಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ. ಶಾಸಕನಾಗಿ, ಸಚಿವನಾಗಿ ಅನುಭವವಿದೆ. ಆದರೆ ಒತ್ತಡ ಮಾಡುವುದಿಲ್ಲ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ರಾಜ್ಯಾಧ್ಯಕ್ಷ ಪಟ್ಟದ ಆಸೆಯನ್ನು ಬಹಿರಂಗಪಡಿಸಿದ್ದಾರೆ.

RELATED TOPICS:
English summary :Defeated not by activists, but by wrong decision of BJP party: Renukacharya

ನಾನು ಮತ್ತು ಇಟಲಿ ಎಂದಿಗೂ ಬೇಡುವುದಿಲ್ಲ  - ಟ್ರಂಪ್ ಹೇಳಿಕೆಗೆ ಮೆಲೋನಿ ತಿರುಗೇಟು
ನಾನು ಮತ್ತು ಇಟಲಿ ಎಂದಿಗೂ ಬೇಡುವುದಿಲ್ಲ - ಟ್ರಂಪ್ ಹೇಳಿಕೆಗೆ ಮೆಲೋನಿ ತಿರುಗೇಟು
ಎನ್‌ಡಿಎ ಶಾಸಕರ ಅಡ್ಡ ಮತದಾನ ಆರೋಪ : ಕರ್ನಾಟಕದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್
ಎನ್‌ಡಿಎ ಶಾಸಕರ ಅಡ್ಡ ಮತದಾನ ಆರೋಪ : ಕರ್ನಾಟಕದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್
ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್
ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್
ಮೋದಿ ನಾಯಕರಾಗಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ಅಮೆರಿಕ ಭಾರತವನ್ನು ರಕ್ಷಿಸುತ್ತದೆ - ಅಧ್ಯಕ್ಷ ಟ್ರಂಪ್
ಮೋದಿ ನಾಯಕರಾಗಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ಅಮೆರಿಕ ಭಾರತವನ್ನು ರಕ್ಷಿಸುತ್ತದೆ - ಅಧ್ಯಕ್ಷ ಟ್ರಂಪ್
ಭಾರತದ 3 ನಾವಿಕರ ಸಾವಿನ ವಿಷಯ ಟ್ರಂಪ್ ಎದುರು ಪ್ರಸ್ತಾವ ಮಾಡಿದ ಪ್ರಧಾನಿ ಮೋದಿ
ಭಾರತದ 3 ನಾವಿಕರ ಸಾವಿನ ವಿಷಯ ಟ್ರಂಪ್ ಎದುರು ಪ್ರಸ್ತಾವ ಮಾಡಿದ ಪ್ರಧಾನಿ ಮೋದಿ
 ಜಿ7 ಶೃಂಗಸಭೆಯಲ್ಲಿ ಗಮನ ಸೆಳೆಯುತ್ತದ ಪ್ರಧಾನಿ ಮೋದಿ ಅವರ ವಿಶ್ವಾಸಾರ್ಹತೆಯ ಕೊರತೆ ಹೇಳಿಕೆ
ಜಿ7 ಶೃಂಗಸಭೆಯಲ್ಲಿ ಗಮನ ಸೆಳೆಯುತ್ತದ ಪ್ರಧಾನಿ ಮೋದಿ ಅವರ ವಿಶ್ವಾಸಾರ್ಹತೆಯ ಕೊರತೆ ಹೇಳಿಕೆ
ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಫ್ರಾನ್ಸ್‌ ನಲ್ಲಿ ಕೆಂಪು ಹಾಸಿಗೆ ಸ್ವಾಗತದ ಅನುಪಸ್ಥಿತಿ : ಟ್ರಂಪ್ ಅಸಮಾಧಾನ
ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಫ್ರಾನ್ಸ್‌ ನಲ್ಲಿ ಕೆಂಪು ಹಾಸಿಗೆ ಸ್ವಾಗತದ ಅನುಪಸ್ಥಿತಿ : ಟ್ರಂಪ್ ಅಸಮಾಧಾನ
ಎರಡೂ ಕಡೆಯ ವಾದ ಆಲಿಸಿ ಟಿಎಂಸಿಯ ಬಂಡಾಯ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಎರಡೂ ಕಡೆಯ ವಾದ ಆಲಿಸಿ ಟಿಎಂಸಿಯ ಬಂಡಾಯ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಅಮೆರಿಕದ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲಿ ಸಚಿವರು, ಇರಾನ್ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವ ಪ್ರತಿಜ್ಞೆ
ಅಮೆರಿಕದ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲಿ ಸಚಿವರು, ಇರಾನ್ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವ ಪ್ರತಿಜ್ಞೆ
ಇರಾನ್ ಒಪ್ಪಂದವನ್ನು ಘೋಷಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಆದೇಶ
ಇರಾನ್ ಒಪ್ಪಂದವನ್ನು ಘೋಷಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಆದೇಶ
ಎನ್‌ಡಿಎಗೆ ಟಿಎಂಸಿಯ ಬಂಡಾಯ ಸಂಸದರ ಬೆಂಬಲ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಭೇಟಿ
ಎನ್‌ಡಿಎಗೆ ಟಿಎಂಸಿಯ ಬಂಡಾಯ ಸಂಸದರ ಬೆಂಬಲ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಭೇಟಿ
 ಫ್ರಾನ್ಸ್ ಜೊತೆ ನಡೆಯುತ್ತಿರುವ ರಫೇಲ್ ಚರ್ಚೆಯಲ್ಲಿ ಮೇಕ್ ಇನ್ ಇಂಡಿಯಾ ಗೆ ಒತ್ತು ನೀಡಿದ  ಭಾರತ
ಫ್ರಾನ್ಸ್ ಜೊತೆ ನಡೆಯುತ್ತಿರುವ ರಫೇಲ್ ಚರ್ಚೆಯಲ್ಲಿ ಮೇಕ್ ಇನ್ ಇಂಡಿಯಾ ಗೆ ಒತ್ತು ನೀಡಿದ ಭಾರತ

ನ್ಯೂಸ್ MORE NEWS...