Sun,Jun21,2026
ಕನ್ನಡ / English

ಜೈನ ಮುನಿ ಪ್ರಕರಣ: ಕಠಿಣ ಶಿಕ್ಷೆ ಎಂದರೆ ಏನು? ಆರೋಪಿಗಳಿಗೆ ಯೋಗಿ ಮಾದರಿಯಲ್ಲಿ ಅವರ ಮೇಲೆ ಕ್ರಮ ಆಗಬೇಕು | JANATA NEWS

11 Jul 2023

ಹುಬ್ಬಳ್ಳಿ : ಕರ್ನಾಟಕ ಪೊಲೀಸರು ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಠಿಣ ಶಿಕ್ಷೆ ಎಂದರೆ ಏನು? ನಮ್ಮ ಸಿಸ್ಟಮ್ ಸರಿ ಇಲ್ಲ. ಒಂದು ವರ್ಷದಲ್ಲಿ ಅವರು ಹೊರಗೆ ಬರುತ್ತಾರೆ. ಉತ್ತರಪ್ರದೇಶ ಮಾದರಿಯಲ್ಲಿ ಮೂವರು ಆರೋಪಿಗಳ ಮನೆಗೆ ಬುಲ್ಡೋಜರ್ ಹತ್ತಿಸಬೇಕು. ಕ್ರೌರ್ಯ ಕ್ರೌರ್ಯವೇ. ಅವರು ಯಾರೇ ಆಗಲಿ ಅವರ ಮನೆ ಮೇಲೆ ಬುಲ್ಡೋಜರ್ ಹತ್ತಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಮಕುಮಾರ ನಂದಿ ಸ್ವಾಮೀಜಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಆದರೆ, ಸಿಬಿಐ ಕೇವಲ ಬುರುಡೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂದೂಗಳ ಹತ್ಯೆ ಪ್ರಕರಣಗಳನ್ನು ಸಿಬಿಐಗೆ ಕೊಟ್ಟರು, ನಂತರ ಏನಾಯ್ತು? 22 ಪ್ರಕರಣಗಳಿಗೆ ನ್ಯಾಯ ಸಿಕ್ಕಿದೆಯೇ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ಸರ್ಕಾರ ಬಂದ ಮೇಲೆ ಹಿಂದೂ ವಿರೋಧಿ ವಾತಾವರಣ ಸೃಷ್ಠಿಯಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಆತಂಕ ಇತ್ತು. ಬಿಜೆಪಿ ಸರ್ಕಾರವಿದ್ದಾಗಲೂ ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ಅದಕ್ಕಾಗಿ ಬಿಜೆಪಿಯವರನ್ನು ಕರ್ನಾಟಕದಲ್ಲಿ ನೆಲಸಮ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.

ಹೀರೆಕುಡಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ತಾಲೂಕಿನ ವರೂರ್ ಜೈನ್ ಮಂದಿರಕ್ಕೆ ಭೇಟಿ ನೀಡಿದ ಮುತಾಲಿಕ್ ಜೈನಮುನಿ ಗುಣಧರನಂದಿ ಮಹಾರಾಜ್ ಅವರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತ ಕಾಮಕುಮಾರ ನಂದಿ ಶ್ರೀಗಳ ಹಿನ್ನೆಲೆ ಬಗ್ಗೆ ಚರ್ಚೆ ಮಾಡಿದ ಅವರು, ಜೈನ ಧರ್ಮದ ಜೊತೆಗೆ ಹಿಂದೂಪರ ಸಂಘಟನೆಗಳು ಇವೆ ಎಂಬ ಭರವಸೆಯನ್ನು ನೀಡಿದರು.

ಪರೇಶ್ ಮೇಸ್ತಾ ಪ್ರಕರಣ ಯಾವ ಹಂತದಲ್ಲಿದೆ?22 ಕೇಸ್‌ಗಳಿಗೆ ನ್ಯಾಯ ಸಿಕ್ಕಿದೆಯಾ? ಬಿಜೆಪಿಯವರು ಇದೀಗ ಸಿಬಿಐಗೆ ವಹಿಸಿ ಎಂದು ಹೇಳುತ್ತಿದ್ದಾರೆ. ಇವರೇನು ಸಾಚಾಗಳಾ? ರಾಜಕಾರಣಿಗಳು ನಿರ್ಲಜ್ಜರು. ನಾನು ಹಿಂದೂತ್ವ ಉಳಿಸಲು ರಾಜಕಾರಣಕ್ಕೆ ಬಂದಿದ್ದೇನೆ. ರಾಜಕಾರಣ ಮಾಡಲಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಜೈನ ಸ್ವಾಮೀಜಿಯ ಹತ್ಯೆ ನಾವು ಖಂಡಿಸುತ್ತೇವೆ. ನಾನು ಅಲ್ಲಿಗೆ ಭೇಟಿ ಕೊಟ್ಟು ಬಂದಿದ್ದೇನೆ. ಮಠದಲ್ಲಿ ಸ್ವಾಮೀಜಿ ಒಬ್ಬರೇ ಇರುತ್ತಿದ್ದರು. ಹೀರೆಕುಡಿಯಿಂದ ಮಠ ಸುಮಾರು 2 ಕಿಲೋ ಮೀಟರ್ ದೂರ ಇದೆ. ಒಂಟಿತನ ನೋಡಿ ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ. ಈ ಕೊಲೆ ಸಾಮಾನ್ಯ ಕೊಲೆ ಅಲ್ಲ. ಕುರಿ, ಕೋಳಿ ಕತ್ತರಿಸುವ ರೀತಿಯಲ್ಲಿ ಹತ್ಯೆ ಮಾಡಿದ್ದಾರೆ.

ಘಟನೆಯ ಸಂಪೂರ್ಣ ಮಾಹಿತಿಯನ್ನು ಸರ್ಕಾರ ಹೊರ ಹಾಕಬೇಕು. ಇದರ ಹಿಂದೆ ಹಣದ ಕಾರಣ ಇಲ್ಲ, ಬೇರೆ ಏನೋ ಷಡ್ಯಂತ್ರ ಇದೆ. ಕರ್ನಾಟಕ ಪೊಲೀಸರು ಕೇವಲ ನಾಲ್ಕು ಗಂಟೆಯಲ್ಲಿ ಬಂಧಿಸಿದ್ದಾರೆ. ಉತ್ತರ ಪ್ರದೇಶ ಮಾದರಿಯಲ್ಲಿ ಮೂರು ಆರೋಪಿಗಳ ಮನೆಗೆ ಬುಲ್ಡೋಜರ್ ಹತ್ತಿಸಬೇಕು.

ಕೊಲೆಗಾರರದ್ದು ತಾಲಿಬಾನ್ ಮನಸ್ಥಿತಿ. ಇದರಲ್ಲಿ ಮುಚ್ಚು ಮರೆ ಮಾಡಿದರೆ ದೇಶಕ್ಕೆ ಅಪಾಯಕಾರಿ. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಎಲ್ಲರೂ ಬಾಯಿ ಮುಚ್ಚಿ. ತನಿಖೆಗೆ ಮುಕ್ತ ಅವಕಾಶ ಕೊಡಬೇಕು. ಯಾರೂ ಯಾವುದೇ ಒತ್ತಾಯಕ್ಕೆ ಮಣಿಯಬಾರದು. ಯೋಗಿ ಮಾದರಿಯಲ್ಲಿ ಅವರ ಮೇಲೆ ಕ್ರಮ ಆಗಬೇಕು. ಯಾರೂ ಅವರ ಪರ ವಕಾಲತ್ತು ಮಾಡಬಾರದು ಎಂದು ನಾನು ವಕೀಲರ ಸಂಘಕ್ಕೆ ಮನವಿ ಮಾಡುತ್ತೇನೆ. ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

RELATED TOPICS:
English summary :The CBI is only concerned with the killing of Hindu activists in both the Burude, Congress and BJP governments

ನಾನು ಮತ್ತು ಇಟಲಿ ಎಂದಿಗೂ ಬೇಡುವುದಿಲ್ಲ  - ಟ್ರಂಪ್ ಹೇಳಿಕೆಗೆ ಮೆಲೋನಿ ತಿರುಗೇಟು
ನಾನು ಮತ್ತು ಇಟಲಿ ಎಂದಿಗೂ ಬೇಡುವುದಿಲ್ಲ - ಟ್ರಂಪ್ ಹೇಳಿಕೆಗೆ ಮೆಲೋನಿ ತಿರುಗೇಟು
ಎನ್‌ಡಿಎ ಶಾಸಕರ ಅಡ್ಡ ಮತದಾನ ಆರೋಪ : ಕರ್ನಾಟಕದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್
ಎನ್‌ಡಿಎ ಶಾಸಕರ ಅಡ್ಡ ಮತದಾನ ಆರೋಪ : ಕರ್ನಾಟಕದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್
ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್
ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್
ಮೋದಿ ನಾಯಕರಾಗಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ಅಮೆರಿಕ ಭಾರತವನ್ನು ರಕ್ಷಿಸುತ್ತದೆ - ಅಧ್ಯಕ್ಷ ಟ್ರಂಪ್
ಮೋದಿ ನಾಯಕರಾಗಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ಅಮೆರಿಕ ಭಾರತವನ್ನು ರಕ್ಷಿಸುತ್ತದೆ - ಅಧ್ಯಕ್ಷ ಟ್ರಂಪ್
ಭಾರತದ 3 ನಾವಿಕರ ಸಾವಿನ ವಿಷಯ ಟ್ರಂಪ್ ಎದುರು ಪ್ರಸ್ತಾವ ಮಾಡಿದ ಪ್ರಧಾನಿ ಮೋದಿ
ಭಾರತದ 3 ನಾವಿಕರ ಸಾವಿನ ವಿಷಯ ಟ್ರಂಪ್ ಎದುರು ಪ್ರಸ್ತಾವ ಮಾಡಿದ ಪ್ರಧಾನಿ ಮೋದಿ
 ಜಿ7 ಶೃಂಗಸಭೆಯಲ್ಲಿ ಗಮನ ಸೆಳೆಯುತ್ತದ ಪ್ರಧಾನಿ ಮೋದಿ ಅವರ ವಿಶ್ವಾಸಾರ್ಹತೆಯ ಕೊರತೆ ಹೇಳಿಕೆ
ಜಿ7 ಶೃಂಗಸಭೆಯಲ್ಲಿ ಗಮನ ಸೆಳೆಯುತ್ತದ ಪ್ರಧಾನಿ ಮೋದಿ ಅವರ ವಿಶ್ವಾಸಾರ್ಹತೆಯ ಕೊರತೆ ಹೇಳಿಕೆ
ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಫ್ರಾನ್ಸ್‌ ನಲ್ಲಿ ಕೆಂಪು ಹಾಸಿಗೆ ಸ್ವಾಗತದ ಅನುಪಸ್ಥಿತಿ : ಟ್ರಂಪ್ ಅಸಮಾಧಾನ
ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಫ್ರಾನ್ಸ್‌ ನಲ್ಲಿ ಕೆಂಪು ಹಾಸಿಗೆ ಸ್ವಾಗತದ ಅನುಪಸ್ಥಿತಿ : ಟ್ರಂಪ್ ಅಸಮಾಧಾನ
ಎರಡೂ ಕಡೆಯ ವಾದ ಆಲಿಸಿ ಟಿಎಂಸಿಯ ಬಂಡಾಯ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಎರಡೂ ಕಡೆಯ ವಾದ ಆಲಿಸಿ ಟಿಎಂಸಿಯ ಬಂಡಾಯ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಅಮೆರಿಕದ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲಿ ಸಚಿವರು, ಇರಾನ್ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವ ಪ್ರತಿಜ್ಞೆ
ಅಮೆರಿಕದ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲಿ ಸಚಿವರು, ಇರಾನ್ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವ ಪ್ರತಿಜ್ಞೆ
ಇರಾನ್ ಒಪ್ಪಂದವನ್ನು ಘೋಷಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಆದೇಶ
ಇರಾನ್ ಒಪ್ಪಂದವನ್ನು ಘೋಷಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಆದೇಶ
ಎನ್‌ಡಿಎಗೆ ಟಿಎಂಸಿಯ ಬಂಡಾಯ ಸಂಸದರ ಬೆಂಬಲ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಭೇಟಿ
ಎನ್‌ಡಿಎಗೆ ಟಿಎಂಸಿಯ ಬಂಡಾಯ ಸಂಸದರ ಬೆಂಬಲ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಭೇಟಿ
 ಫ್ರಾನ್ಸ್ ಜೊತೆ ನಡೆಯುತ್ತಿರುವ ರಫೇಲ್ ಚರ್ಚೆಯಲ್ಲಿ ಮೇಕ್ ಇನ್ ಇಂಡಿಯಾ ಗೆ ಒತ್ತು ನೀಡಿದ  ಭಾರತ
ಫ್ರಾನ್ಸ್ ಜೊತೆ ನಡೆಯುತ್ತಿರುವ ರಫೇಲ್ ಚರ್ಚೆಯಲ್ಲಿ ಮೇಕ್ ಇನ್ ಇಂಡಿಯಾ ಗೆ ಒತ್ತು ನೀಡಿದ ಭಾರತ

ನ್ಯೂಸ್ MORE NEWS...