ವಿಪಕ್ಷ ನಾಯಕ ಸ್ಥಾನ ಕೂಡ ಅಡ್ಜಸ್ಟಮೆಂಟ್ ಮಾಡಿಕೊಂಡಿದ್ದೀರಾ? | JANATA NEWS

ಬೆಂಗಳೂರು : ನನಗಿರುವ ಮಾಹಿತಿ ಪ್ರಕಾರ ನಿಮ್ಮನ್ನ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲ್ಲ ಎಂದು ಸದನದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ ಅದಕ್ಕೆ ಉತ್ತರಿಸಿದ ಯತ್ನಾಳ್ ನೀವು ವಿಪಕ್ಷ ನಾಯಕ ಸ್ಥಾನ ಕೂಡ ಅಡ್ಜಸ್ಟಮೆಂಟ್ ಮಾಡಿಕೊಂಡಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಪದೇ ಪದೇ ಎದ್ದು ನಿಲ್ಲಬೇಡಿ ಯತ್ನಾಳ್. ನೀವು ಕೂಡಾ ವಿಪಕ್ಷ ನಾಯಕನ ಆಕಾಂಕ್ಷಿ ಅಂತಾ ಗೊತ್ತು. ಈ ರೀತಿ ಎದ್ದು ನಿಂತರೆ ನಿಮ್ಮನ್ನು ವಿಪಕ್ಷ ನಾಯಕ ಮಾಡಲ್ಲ. ನನ್ನ ಮಾಹಿತಿ ಪ್ರಕಾರ ನೀವು ವಿಪಕ್ಷ ನಾಯಕ ಆಗಲ್ಲ ಎಂದೂ ಸಿಎಂ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಬಸನಗೌಡ ಪಾಟೀಲ್ ಯತ್ನಾಳ್, ನೂರಕ್ಕೆ ನೂರರಷ್ಟು ನಾನೇ ವಿಪಕ್ಷ ನಾಯಕ ಆಗ್ತೀನಿ. ನೀವು ಈ ಹಿಂದೆ ಅವರ ಅಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದಿದ್ದೀರಿ. ಆದರೆ, ಅವರೇ ಸಿಎಂ ಆದರು. ಈಗಲೂ ಅಷ್ಟೇ ನಾನು ಆಗಲ್ಲ ಅಂತೀರಿ, ಆದರೆ ನಾನೇ ಆಗ್ತೀನಿ ಅಂತ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಅಲ್ಲದೆ, ನೀವು ಇಷ್ಟು ಖಂಡಿತವಾಗಿ ಹೇಳ್ತಾ ಇದೀರಾ ಅಂದ್ರೆ ನೀವು ಯಾರ ಜೊತೆಗೋ ಅಡ್ಜಸ್ಟ್ಮೆಂಟ್ ಆಗಿರಬೇಕು ಎಂದೂ ಯತ್ನಾಳ್ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಕೆರಳಿದ ಸಿಎಂ ಸಿಎಂ ಸಿದ್ದರಾಮಯ್ಯ, ‘ನನ್ನ ರಾಜಕೀಯ ಜೇವನದಲ್ಲಿ ಎಂದೂ ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡಲಿಲ್ಲ. ನಾನು ವಿಪಕ್ಷದಲ್ಲಿರುವಾಗ ಇಲ್ಲಿ ಸಚಿವರಾದವರು ಕೆಲವರು ಇದ್ದಾರೆ, ಅವರ ಮನೆಗೆ ಹೋಗಿದ್ದೆನಾ ಕೇಳಿ, ನನ್ನ ರಾಜಕೀಯ ಜೀವನದಲ್ಲಿ ಹೊಂದಾಣಿಕೆ ರಾಜಕಾರಣ ಎನ್ನುವ ಪದವೇ ಇಲ್ಲ’ ಎಂದು ಕಿಡಿ ಕಾರಿದರು. ಇದಕ್ಕೆ ಉತ್ತರ ನೀಡಿದ ಬಿಜೆಪಿ ಸದಸ್ಯರು, ಮನೆಗೆ ಹೋಗುವುದು ಬೇಡ ಫೋನ್ ನಲ್ಲಿ ಮಾತನಾಡಿದರೆ ಆಗುತ್ತದೆ ಎಂದರು.