ಗರ್ಭಿಣಿ ಪತ್ನಿಯನ್ನ ಅಪಘಾತದಿಂದ ಹತ್ಯೆ ಮಾಡಲು ಸಂಚು, 6 ತಿಂಗಳ ಬಳಿಕ ಆರೋಪಿಗಳು ಸೆರೆ | JANATA NEWS

ಬೆಂಗಳೂರು : ಗರ್ಭಿಣಿ ಪತ್ನಿಯನ್ನ ಅಪಘಾತದಿಂದ ಹತ್ಯೆ ಮಾಡಲು ಸಂಚು ರೂಪಿಸಿ 6 ತಿಂಗಳ ಬಳಿಕ ಆರೋಪಿಗಳು ಸೆರೆಸಿಕ್ಕ ಘಟನೆ ನಡೆದಿದೆ.
ಅರವಿಂದ ಹಾಗೂ ಉದಯ್ ಕುಮಾರ್ ಬಂಧಿತರು. ಹೊಸ ವರ್ಷದ ದಿನದಂದೇ ಬಾಗಲೂರಿನ ಕೆಐಡಿಬಿ ಲೇಔಟ್ನಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಚೈತನ್ಯ ಎಂಬಾಕೆಗೆ ಅಪಘಾತವೆಸಗಿದ್ದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆಕೆಯ ಪತಿ ಅರವಿಂದ್ ಹಾಗೂ ಆತನ ಸಹಚರ ಉದಯ್ ಕುಮಾರ್ ಬಂದಿಸಿದ್ದರೆ.
ಅರವಿಂದ್ ಪತ್ನಿಯ ಕೊಲೆಗೆ ಸಿನಿಮೀಯ ರೀತಿಯಲ್ಲಿ ಸಂಚು ರೂಪಿಸಿದ್ದನು. ಆದ್ರೆ ಪತ್ನಿ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಒಂದೂವರೆ ವರ್ಷದ ಹಿಂದೆ ಚೈತನ್ಯಾ ಎಂಬವನ್ನು ಅರವಿಂದ್ ಮದುವೆಯಾಗಿದ್ದನು. ಮದುವೆ ಬಳಿಕ ಅತ್ತೆ-ಮಾವನನ್ನು ಬಿಟ್ಟು ಪ್ರತ್ಯೇಕವಾಗಿ ವಾಸವಾಗಿರೋಣ ಎಂದು ಪತಿಯ ಮೇಲೆ ಒತ್ತಡ ಹಾಕಿದ್ದರು.
ತದನಂತರ ತನ್ನ ತಂದೆ ತಾಯಿಯನ್ನು ಪತ್ನಿ ಚೈತನ್ಯ ಅವರೇ ತನ್ನಿಂದ ದೂರ ಮಾಡಿದರು ಎಂದು ಅರವಿಂದ್ ಕೋಪಗೊಂಡಿದ್ದ. ಇದೇ ಕೋಪದಿಂದ ಒಂದೂವರೆ ವರ್ಷಕ್ಕೆ ವಿಚ್ಛೇದನ ಕೊಡುವಂತೆ ಪತ್ನಿಯನ್ನು ಪೀಡಿಸಲಾರಂಭಿಸಿದ್ದ. ಆದರೆ ವಿಚ್ಛೇದನ ನೀಡಲು ಚೈತನ್ಯ ಒಪ್ಪಿರಲಿಲ್ಲ. ಹಾಗಾಗಿ ಆಕೆಯನ್ನು ಕೊಲೆ ಮಾಡಲು ಅರವಿಂದ್ ನಿರ್ಧರಿಸಿದ್ದ.
ಅದಕ್ಕಾಗಿ ಹಳೆಯದೊಂದು ಟಾಟಾ ಸುಮೋ ಖರೀದಿಸಿ, ಅದಕ್ಕೊಬ್ಬ ಚಾಲಕನನ್ನೂ ನೇಮಿಸಿದ್ದ. ಉದಯಕುಮಾರ್ ಎಂಬ ಆ ಚಾಲಕನಿಗೆ ಅಪಘಾತವಾದ ರೀತಿಯಲ್ಲಿ ಪತ್ನಿಯನ್ನು ಕೊಲೆ ಮಾಡಿಸುವಂತೆ ಹೇಳಿದ್ದ.
ಅರವಿಂದ್ ಸೂಚನೆಯಂತೆ ಉದಯ್ಕುಮಾರ್ ಸಿಸಿಟಿವಿ ಇರದಂಥ ಜಾಗವೊಂದನ್ನು ಗುರುತಿಸಿ ಅಲ್ಲಿ ಚೈತನ್ಯಳನ್ನು ಆಯಕ್ಸಿಡೆಂಟ್ ಮಾದರಿಯಲ್ಲಿ ಕೊಲೆ ಮಾಡಲು ಯತ್ನಿಸುತ್ತಾನೆ. ಏಳು ತಿಂಗಳ ಹಿಂದೆ ಭರತನಾಟ್ಯ ಕ್ಲಾಸ್ ಮುಗಿಸಿಕೊಂಡು ಚೈತನ್ಯಾ ಮನೆಗೆ ಹಿಂದಿರುಗುತ್ತಿರುವಾಗ ಕಾರ್ನಲ್ಲಿ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಆದರೆ ಆಕೆ ಸಣ್ಣಪುಟ್ಟ ಗಾಯಗಳಿಂದಾಗಿ ಬದುಕುಳಿಯುತ್ತಾಳೆ. ಡಿಕ್ಕಿ ಹೊಡೆದ ಬಳಿಕ ಉದಯ್ ಮತ್ತು ಅರವಿಂದ್ ಎಸ್ಕೇಪ್ ಆಗಿದ್ದರು.
ಪೊಲೀಸರು ಉದಯ್ ಮತ್ತು ಅರವಿಂದ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಯತ್ನದ ವಿಷಯ ಬೆಳಕಿಗೆ ಬಂದಿದೆ.