Thu,Nov30,2023
ಕನ್ನಡ / English

ಮೈತ್ರಿಕೂಟಕ್ಕೆ ಇಂಡಿಯಾ ಎಂಬ ಹೆಸರು ಫೈನಲ್ ಆಗಿದೆ: ಮಲ್ಲಿಕಾರ್ಜುನ ಖರ್ಗೆ | JANATA NEWS

18 Jul 2023
829

ಬೆಂಗಳೂರು : ಮೈತ್ರಿಕೂಟಕ್ಕೆ ಇಂಡಿಯಾ ಎಂಬ ಹೆಸರು ಫೈನಲ್ ಆಗಿದೆ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಭಾಗಿಯಾದ ಎಐಸಿಸಿ‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಎಲ್ಲ 26 ಪಕ್ಷದ ನಾಯಕರ ಸಭೆ ಮಾಡಿದ್ದೇವೆ. ಸೋನಿಯಾ ಗಾಂಧಿ ಹಾಗೂ 26 ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದು, ಬಹಳ ಮಹತ್ವದ ಸಭೆ ಮಾಡಿದ್ದೇವೆ. ಪ್ರಜಾಪ್ರಭುತ್ವ ಉಳಿವಿಗಾಗಿ ಸಭೆ ಮಾಡಿದ್ದೇವೆ. ಒಟ್ಟಾಗಿ ಸೇರಿ ಒಂದೇ ಧ್ವನಿ ಎತ್ತಲಿದ್ದೇವೆ ಎಂದಿದ್ದಾರೆ.

ಜನರ ಪರವಾದ ನಿರ್ಣಯಗಳನ್ನ ತೆಗೆದುಕೊಂಡಿದ್ದೇವೆ ಎಲ್ಲರು ಒಪ್ಪುವಂತಹ ಹೆಸರನ್ನ ಹುಡುಕಿದ್ದೇವೆ INDIA ಹೆಸರನ್ನ ಒಕ್ಕೂಟಕ್ಕೆ ಇಡಲಾಗಿದೆ. ಈ ಹೆಸರಿಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.

ನರೇಂದ್ರ ಮೋದಿ ಅವರು ನಮ್ಮ ಸಭೆ ನೋಡಿದ ಬಳಿಕ ಎನ್ಡಿಎ ಮೀಟಿಂಗ್ ಕರೆದಿದ್ದಾರೆ.. ಮೊದಲು ಎನ್ಡಿಎ‌ ಬಗ್ಗೆ ಅವರಿಗೇ ನೆನಪಿರಲಿಲ್ಲ ಅಂತ ವ್ಯಂಗ್ಯವಾಡಿದರು. NDAನಲ್ಲಿರುವ ಪಕ್ಷಗಳು ಮೋದಿ ಮುಂದೆ ತುಟಿ ಬಿಚ್ಚಿ ಮಾತನಾಡುವಾಗಿರಲಿಲ್ಲ. ಈಗ NDA ತುಕಡೇ ತುಕಡೇ ಆಗಿದ್ದರು.. ಈಗ ಅವರು ಅವೆಲ್ಲವನ್ನೂ ಜೋಡಿಸುವ ಕೆಲಸ ಮಾಡ್ತಿದ್ದಾರೆ.. ಅಂದರೆ ಮೋದಿ ನಮ್ಮಿಂದ‌ ಒಗ್ಗಟ್ಟಿನಿಂದ ಹೆದರಿಕೊಂಡಿದ್ದಾರೆ ಅಂತ ವ್ಯಂಗ್ಯವಾಡಿದರು.

ಮುಂದಿನ ಸಭೆಯನ್ನು ಮುಂಬೈನಲ್ಲಿ ನಡೆಸಲಾಗುತ್ತದೆ. ಬಿಜೆಪಿಯು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಸರ್ಕಾರದ ಸಂಸ್ಥೆಗಳಾದ ಸಿಬಿಐ, ಇಡಿಯನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷವನ್ನು ಹೆಣೆಯುತ್ತಿದೆ. ನಮಗೆ ದೇಶ ಮುಖ್ಯ. ರಾಜಕೀಯವಾಗಿ ನಮಗೆ ರಾಜ್ಯವಾರು ವಿಭಿನ್ನತೆ ಬೇರೆ ಇರಬಹುದು‌. ಆದರೆ ದೇಶದ ಉದ್ದೇಶಕ್ಕೆ ಎಲ್ಲರೂ ಒಗ್ಗಟ್ಟಾಗಿ ಹೋಗಲು ನಿರ್ಣಯಿಸಲಾಗಿದೆ. ಪಾಟ್ನಾ ಸಭೆಯಲ್ಲಿ 16 ಪಕ್ಷಗಳು ಇದ್ದವು, ಈ ಸಭೆಗೆ 26 ಪಕ್ಷಗಳು ಬಂದಿವೆ‌ ಎಂದರು.

2024ರ ಚನಾವಣೆಯಲ್ಲಿ ಮೋದಿ ಸೋಲಿಸಲು ಎಲ್ಲಾ ಪಕ್ಷಗಳ ಒಗ್ಗಟ್ಟಿನ ಮಂತ್ರ, ಸಿದ್ಧಾಂತ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ.

ನಮ್ಮ ಮೈತ್ರಿಕೂಟಕ್ಕೆ ಒಂದು ಹೆಸರು ಇಟ್ಟಿದ್ದೇವೆ. ಹಿಂದೆ ಯುಪಿಎ ಅಂತ ಹೆಸರು ಇತ್ತು. ಈಗ india ಅಂತ ನಾಮಕರಣ ಮಾಡಿದ್ದೇವೆ. ಹಲವು ಸಮಸ್ಯೆಗಳ ಬಗ್ಗೆ ಚರ್ಚೆಯಾಗಿದೆ 11 ಮಂದಿ ಸದಸ್ಯರ ಸಂಯೋಜಕರ ಸಮಿತಿ ರಚನೆಯಾಗಿದೆ ಶೀಘ್ರದಲ್ಲೇ ಸದಸ್ಯರನ್ನ ಹೆಸರಿಸಲಾಗುವುದು ಸದ್ಯದಲ್ಲೇ ಮುಂಬೈನಲ್ಲಿ ಸಭೆಯನ್ನ ನಡೆಸಲಾಗುತ್ತದೆ ಪ್ರಚಾರಕ್ಕಾಗಿ ಕಮಿಟಿಯನ್ನ ರಚಿಸಲಾಗುತ್ತದೆ ದೆಹಲಿಯಲ್ಲೇ ಈ ಕಮಿಟಿ ಕಾರ್ಯನಿರ್ವಹಿಸಲಿದೆ ಅಂತ ಖರ್ಗೆ ಹೇಳಿದ್ದಾರೆ.

ಇಂಡಿಯಾ ಅಂದರೆ ಇಂಡಿಯನ್ ನ್ಯಾಶನಲ್ ಡೆಮಾಕ್ರಟಿಕ್ ಇನ್‌ಕ್ಲೂಸೀವ್ ಅಲಯನ್ಸ್ ಒಕ್ಕೂಟ.
I: Indian
N: National
D: Democractic
I: Inclusive
A: Alliance

RELATED TOPICS:
English summary :The name India is final for the alliance: Mallikarjuna Kharge

ಸರ್ಕಾರಿ ಶಾಲೆಗಳಿಗೆ ಹಿಂದೂ ಹಬ್ಬಗಳ ರಜೆ ಕಡಿಮೆ, ಮುಸ್ಲಿಂ ಹಬ್ಬಕ್ಕೆ ಹೆಚ್ಚು : ಬಿಹಾರ ಸರ್ಕಾರದ ಎಡವಟ್ಟು
ಸರ್ಕಾರಿ ಶಾಲೆಗಳಿಗೆ ಹಿಂದೂ ಹಬ್ಬಗಳ ರಜೆ ಕಡಿಮೆ, ಮುಸ್ಲಿಂ ಹಬ್ಬಕ್ಕೆ ಹೆಚ್ಚು : ಬಿಹಾರ ಸರ್ಕಾರದ ಎಡವಟ್ಟು
ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿರುವ ಅಗ್ನಿವೀರ್ ಮಹಿಳೆ ನೇಣು ಬಿಗಿದು ಆತ್ಮಹತ್ಯೆ
ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿರುವ ಅಗ್ನಿವೀರ್ ಮಹಿಳೆ ನೇಣು ಬಿಗಿದು ಆತ್ಮಹತ್ಯೆ
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ
ಯಶವಂತಪುರ ನಿಲ್ದಾಣದ ಪುನರಾಭಿವೃದ್ಧಿ ಮತ್ತು ಉಪನಗರ ರೈಲ್ವೆ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ರೈಲ್ವೆ ಸಚಿವರು
ಯಶವಂತಪುರ ನಿಲ್ದಾಣದ ಪುನರಾಭಿವೃದ್ಧಿ ಮತ್ತು ಉಪನಗರ ರೈಲ್ವೆ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ರೈಲ್ವೆ ಸಚಿವರು
ಪ್ರಧಾನಿ ಭದ್ರತಾ ಲೋಪ : 7 ಪಂಜಾಬ್ ಪೊಲೀಸ್ ಅಧಿಕಾರಿ ಅಮಾನತು
ಪ್ರಧಾನಿ ಭದ್ರತಾ ಲೋಪ : 7 ಪಂಜಾಬ್ ಪೊಲೀಸ್ ಅಧಿಕಾರಿ ಅಮಾನತು
ರನ್ನಿಂಗ್ ರೇಸ್‍ನಲ್ಲಿ ಸೋಲು, ಖಿನ್ನತೆಯಿಂದ ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ!
ರನ್ನಿಂಗ್ ರೇಸ್‍ನಲ್ಲಿ ಸೋಲು, ಖಿನ್ನತೆಯಿಂದ ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ!
ಸಿಬಿಐ ತನಿಖೆ ಹಿಂಪಡೆಯುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಮುಂದೂಡಿಕೆ
ಸಿಬಿಐ ತನಿಖೆ ಹಿಂಪಡೆಯುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಮುಂದೂಡಿಕೆ
ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ರೂ. 50 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ರೂ. 50 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಲೂಟಿಗೈದ 5 ಕೋಟಿಯನ್ನು ತೆಲಂಗಾಣದಲ್ಲಿ ಮತ ಆಮಿಷಕ್ಕಾಗಿ ಬಳಸುತ್ತಿದೆ - ಬಿಜೆಪಿ
ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಲೂಟಿಗೈದ 5 ಕೋಟಿಯನ್ನು ತೆಲಂಗಾಣದಲ್ಲಿ ಮತ ಆಮಿಷಕ್ಕಾಗಿ ಬಳಸುತ್ತಿದೆ - ಬಿಜೆಪಿ
 ಡಿಕೆ ಶಿವಕುಮಾರ್ ಅವರ ಖಾಸಗಿ ವಕೀಲರು ಅಡ್ವೋಕೇಟ್ ಜೆನರಲ್ ಆಗಿ ಸಿ.ಬಿ.ಐ ತನಿಖೆ ಹಿಂಪಡೆಯಲು ಶಿಫಾರಸು ಮಾಡಿದ್ದಾರೆ- ಯತ್ನಾಳ್
ಡಿಕೆ ಶಿವಕುಮಾರ್ ಅವರ ಖಾಸಗಿ ವಕೀಲರು ಅಡ್ವೋಕೇಟ್ ಜೆನರಲ್ ಆಗಿ ಸಿ.ಬಿ.ಐ ತನಿಖೆ ಹಿಂಪಡೆಯಲು ಶಿಫಾರಸು ಮಾಡಿದ್ದಾರೆ- ಯತ್ನಾಳ್
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮುಖಂಡನನ್ನು ಹೊಡೆದು ಹಾಕಿದ ಭಾರತ ಪಡೆ
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮುಖಂಡನನ್ನು ಹೊಡೆದು ಹಾಕಿದ ಭಾರತ ಪಡೆ
ಇಂದಿರಾಗಾಂಧಿ ಜನ್ಮದಿನವೇ ಭಾರತದ ಕ್ರಿಕೆಟ್ ತಂಡ ಸೋಲಲು ಕಾರಣ ಸಿಎಂ ಹೇಮಂತ್ ಬಿಸ್ವ ಶರ್ಮ
ಇಂದಿರಾಗಾಂಧಿ ಜನ್ಮದಿನವೇ ಭಾರತದ ಕ್ರಿಕೆಟ್ ತಂಡ ಸೋಲಲು ಕಾರಣ ಸಿಎಂ ಹೇಮಂತ್ ಬಿಸ್ವ ಶರ್ಮ

ನ್ಯೂಸ್ MORE NEWS...